Advertisement

Pakistan ಶರಣಾದ ಚಿತ್ರ ಸೇನಾ ಕಚೇರಿಯಿಂದ ತೆರವು: ಕಾಂಗ್ರೆಸ್‌ ಕಿಡಿ

01:11 AM Dec 17, 2024 | Team Udayavani |

ಹೊಸದಿಲ್ಲಿ: 1971ರ ಯುದ್ಧದಲ್ಲಿ ಭಾರತೀಯ ಸೇನೆ ಎದುರು ಪಾಕಿಸ್ಥಾನ ಮಂಡಿಯೂರಿದ್ದಕ್ಕೆ ಸಂಬಂಧಿಸಿದ ಫೋಟೋವನ್ನು ಭಾರತದ ಸೇನೆಯ ಕೇಂದ್ರ ಕಚೇರಿಯಲ್ಲಿ ಇರಿಸಲಾಗಿತ್ತು. ಅದನ್ನು ಈಗ ತೆರವುಗೊಳಿಸಿದ್ದು, ಈ ಬಗ್ಗೆ ಲೋಕಸಭೆಯಲ್ಲಿ ಸಂಸದೆ ಪ್ರಿಯಾಂಕಾ ಸೇರಿ ಹಲವು ಕಾಂಗ್ರೆಸಿಗರು ಆಕ್ಷೇಪಿಸಿದ್ದಾರೆ.

Advertisement

1971ರಲ್ಲಿ ಸೇನೆ ಶೌರ್ಯ ತೋರಿದ್ದಕ್ಕಾಗಿಯೇ ಡಿ.16ರಂದು ವಿಜಯ್‌ ದಿವಸ್‌ ಆಚರಿಸಲು ಸಾಧ್ಯವಾಗುತ್ತಿದೆ. ಅದರ ಪ್ರತೀಕವಾಗಿದ್ದ ಫೋಟೋ ತೆರವು ಸರಿ ಅಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ. ಸಂಸದ ಮಾಣಿಕಂ ಟ್ಯಾಗೋರ್‌ ಕೂಡ ಮಾತನಾಡಿ, ಆ ಯುದ್ಧ ಗೆದ್ದಿದ್ದು ಇಂದಿರಾ ಗಾಂಧಿ ಅವರ ಕಾಲದಲ್ಲಿ. ಭಾರತದ ನಿಜವಾದ ಇತಿಹಾಸ ಅಳಿಸುವ ಕೇಂದ್ರದ ಪ್ರಯತ್ನದಲ್ಲಿ ಇದೂ ಒಂದು. ಫೋಟೋವನ್ನು ಮರಳಿ ಅದೇ ಜಾಗದಲ್ಲಿ ಇರಿಸಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next