Advertisement
ರವಿವಾರ ಲಾಹೋರ್‌ನಲ್ಲಿರುವ ಮಿನಾರ್-ಎ ಪಾಕಿಸ್ಥಾನ್ ಬಳಿ ಪಿಟಿಐನ ಸಾವಿರಾರು ಕಾರ್ಯಕರ್ತರು ಜಮಾಯಿಸಿ ಪ್ರತಿ ಭಟನೆ ನಡೆಸಿದ್ದಾರೆ. ಪ್ರತಿಭಟನಕಾರರ ತಡೆಯಲು ರಸ್ತೆಗಳ ನಡುವೆಯೇ ಪೊಲೀಸರು ಟ್ರಕ್ ಕಂಟೈರ್‌ಗಳನ್ನಿರಿಸಿ ರಸ್ತೆ ತಡೆ ಮಾಡಿದ್ದಾರೆ. ಲಾಹೋರ್‌ನಲ್ಲಿ 30ಕ್ಕೂ ಅಧಿಕ ಮಂದಿ ಪಿಟಿಐ ಕಾರ್ಯಕರ್ತರನ್ನು ಬಂಧಿಸಿ, 200ಕ್ಕೂ ಅಧಿಕ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಸಿಎಂ ಅಲಿ ಅಮಿನ್ ನಾಪತ್ತೆಯಾಗಿದ್ದು, ಅಲ್ಲಿಯೂ ಪ್ರತಿಭಟನೆ ಭುಗಿಲೆದ್ದಿವೆ.ಜೈಶಂಕರ್‌ಗೆ ಆಹ್ವಾನ ನೀಡಿಲ್ಲ: ಪಾಕ್ ಸರಕಾರ ವಿರುದ್ಧ ನಡೆಸುತ್ತಿರುವ ಪ್ರತಿ ಭಟನೆ ಯಲ್ಲಿ ಭಾಗಿಯಾಗಿ ಎಂದು ಸಚಿವ ಜೈಶಂಕರ್ ಪಕ್ಷ ಆಹ್ವಾನ ನೀಡಿಲ್ಲ. ಇದು ನಮ್ಮ ಆಂತರಿಕ ವಿಚಾರವಾದ ಕಾರಣ ಅಂಥ ಯಾವುದೇ ಆಹ್ವಾನ ನಾವು ನೀಡುವುದೂ ಇಲ್ಲ ಎಂದಿದೆ.