Advertisement
ಗೆಲ್ಲಲು ಸುಲಭ ಸವಾಲು ಪಡೆದ ಪಾಕಿಸ್ಥಾನ ತಂಡವು ಇಮಾಮ್ ಉಲ್ ಹಕ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಭರ್ಜರಿ ಆಟದಿಂದಾಗಿ 39.3 ಓವರ್‌ಗಳಲ್ಲಿ 3 ವಿಕೆಟಿಗೆ 194 ರನ್ ಪೇರಿಸಿ ಜಯಭೇರಿ ಬಾರಿಸಿತು. ಪಾಕಿಸ್ಥಾನವು ಇನ್ನು ಸೆ. 10ರಂದು ನಡೆಯುವ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.
Related Articles
Advertisement
ನಾಟಕೀಯ ಕುಸಿತಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶವು ಪಾಕಿಸ್ಥಾನದ ಬಿಗು ದಾಳಿಗೆ ರನ್ ಗಳಿಸಲು ಒದ್ದಾಡಿತು. ಆದರೂ ನಾಯಕ ಶಕಿಬ್ ಅಲ್ ಹಸನ್ ಮತ್ತ ಮುಶ್ಫಿಕರ್ ರಹೀಂ ಅವರ ತಾಳ್ಮೆಯ ಅರ್ಧಶತಕದಿಂದಾಗಿ ತಂಡದ ಮೊತ್ತ 193ರ ಗಳಿಸಿತು. ಎರಡು ಬಾರಿ ನಾಟಕೀಯ ಕುಸಿತ ತಂಡ ಬಾಂಗ್ಲಾದೇಶವು 38.4 ಓವರ್‌ಗಳಲ್ಲಿ 193 ರನ್ನಿಗೆ ಆಲೌಟಾಯಿತು. ಎರಡು ಬಾರಿ ನಾಟಕೀಯ ಕುಸಿತ ಕಂಡ ಬಾಂಗ್ಲಾದೇಶವು ಬೇಗನೇ ಆಲೌಟಾಯಿತು. ಶಕಿಬ್ ಮತ್ತು ರಹೀಂ ಅವರ ಅರ್ಧಶತಕ ಮತ್ತು ಅವರಿಬ್ಬರ ನಡುವೆ 100 ರನ್ನುಗಳ ಜತೆಯಾಟದ ಹೊರತಾಗಿಯೂ ಬಾಂಗ್ಲಾ ದೊಡ್ಡ ಮೊತ್ತ ಪೇರಿಸಲು ವಿಫಲವಾಯಿತು. ಆರಂಭದಲ್ಲಿಯೇ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಬಾಂಗ್ಲಾದೇಶವು 47 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆಬಳಿಕ ಶಕಿಬ್ ಮತ್ತು ರಹೀಂ ತಂಡವನ್ನು ಆಧರಿಸಿದರು. ಕೊನೆ ಹಂತದಲ್ಲಿ ಮತ್ತೆ ಕುಸಿತ ಕಂಡ ಬಾಂಗ್ಲಾದೇಶು 30ರಿಂದ 39 ಓವರ್ ನಡುವೆ 47 ರನ್ ಅಂತರದಲ್ಲಿ ಕೊನೆಯ ಆರು ವಿಕೆಟ್ ಕಳೆದುಕೊಂಡು ಆಲೌಟಾಯಿತು. ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ 38.4 ಓವರ್‌ಗಳಲ್ಲಿ 193 (ಮೊಹಮ್ಮದ್ ನೈಮ್ 20, ಶಕಿಬ್ ಅಲ್ ಹಸನ್ 53, ಮುಶ್ಫಿಕರ್ ರಹೀಂ 64, ಹ್ಯಾರಿಸ್ ರವೂಫ್ 19ಕ್ಕೆ 4, ನಸೀಮ್ ಶಾ 34ಕ್ಕೆ 3); ಪಾಕಿಸ್ಥಾನ 39.3 ಓವರ್‌ಗಳಲ್ಲಿ 3 ವಿಕೆಟಿಗೆ 194 (ಫಕಾರ್ ಜಮಾನ್ 20, ಇಮಾಮ್ ಉಲ್ ಹಕ್ 78, ಮೊಹಮ್ಮದ್ ರಿಜ್ವಾನ್ 63 ಔಟಾಗದೆ).