Advertisement

ವಿಶ್ವಕಪ್‌ನಲ್ಲಿ  ಪಾಕ್‌ ಶೂಟರ್  ಪಾಲ್ಗೊಳ್ಳುತ್ತಿಲ್ಲ

05:16 AM Feb 20, 2019 | |

ಹೊಸದಿಲ್ಲಿ: ಭಾರತ ವೀಸಾ ದೊರಕಿದ್ದರೂ ಪಾಕಿಸ್ಥಾನದ ಶೂಟರ್ಗಳು ದಿಲ್ಲಿಯಲ್ಲಿ ನಡೆಯಲಿರುವ ಶೂಟಿಂಗ್‌ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ಥಾನದ ರಾಷ್ಟ್ರೀಯ ರೈಫ‌ಲ್‌ ಅಸೋಸಿಯೇಶನ್‌ ತಿಳಿಸಿದೆ.
 
ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರ ದಾಳಿ ಬಳಿಕ ಪಾಕಿಸ್ಥಾನ ಶೂಟರ್‌ಗಳು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಭಾರತ ವೀಸಾ ನೀಡುವ ಕುರಿತು ನಿರ್ಧಾರವಾಗಿರಲಿಲ್ಲ. ಆದರೆ ಸೋಮವಾರ ಭಾರತೀಯ ರಾಷ್ಟ್ರೀಯ ರೈಫ‌ಲ್‌ ಅಸೋಸಿಯೇಶ್‌ (ಎನ್‌ಆರ್‌ಎಐ) ಪಾಕಿಸ್ಥಾನ ಶೂಟರ್‌ಗಳಿಗೆ ವೀಸಾ ನೀಡಿತ್ತು. ಆದರೆ ವೀಸಾ ನೀಡಲು ಭಾರತ ತಡ ಮಾಡಿದೆ ಎಂಬ ಕಾರಣಕ್ಕೆ ಎನ್‌ಆರ್‌ಎಪಿ ತನ್ನ ಶೂಟರ್‌ಗಳನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next