Advertisement

ಮಾತುಕತೆಗೆ ಸಿದ್ಧ ಎಂದ ಪಾಕಿಸ್ಥಾನ

08:12 AM Jun 16, 2019 | mahesh |

ಬಿಷ್ಕೆಕ್‌: ಸಮಾನತೆಯ ಆಧಾರದಲ್ಲಿ ಹಾಗೂ ಘನತೆಯಿಂದ ಭಾರತದೊಂದಿಗೆ ಮಾತನಾಡಲು ನಾವು ಸಿದ್ಧವಿದ್ದೇವೆ. ಆದರೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಪಾಕ್‌ ಜೊತೆಗೆ ಮಾತುಕತೆ ನಡೆಸಬೇಕೇ, ಬೇಡವೇ ಎಂದು ನಿರ್ಧರಿಸುವುದು ಭಾರತದ ಕೈಯಲ್ಲಿದೆ. ಹೀಗಾಗಿ ಈಗ ಚೆಂಡು ಭಾರತದ ಅಂಗಳದಲ್ಲಿದೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ ಹೇಳಿದ್ದಾರೆ.

Advertisement

ಎಸ್‌ಸಿಒ ಸಮ್ಮೇಳನದಲ್ಲಿ ಭಾಗವಹಿಸುವ ನಿಮಿತ್ತ ಕಿರ್ಗಿಸ್ತಾನಕ್ಕೆ ಆಗಮಿಸಿದ್ದ ಖುರೇಶಿ, ಎಸ್‌ಸಿಒ ಸಮ್ಮೇಳನದ ವೇಳೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಉಭಯ ಕುಶಲೋಪರಿ ನಡೆಸಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಇಬ್ಬರೂ ಮುಖಂಡರು ಮಾತನಾಡಿದ್ದಾರೆ. ಹಸ್ತಲಾಘವ ಹಾಗೂ ಉಭಯ ಕುಶ ಲೋಪರಿ ಇಬ್ಬರ ಮಧ್ಯೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಭಾರತ ಸರಕಾರ ಚುನಾವಣಾ ಸಮಯದಲ್ಲಿ ಹೊಂದಿದ್ದ ಮನ ಸ್ಥಿತಿಯಿಂದ ಹೊರಬಂದಿಲ್ಲ. ಮತ ಬ್ಯಾಂಕ್‌ಗೆ ಹೊಡೆತ ಬೀಳುವ ಭೀತಿಯಿಂದ ಭಾರತ ಸರಕಾರ ಈ ನಿಲುವನ್ನು ಮುಂದುವರಿಸಿಕೊಂಡು ಬರುತ್ತಿದೆ. ಪಾಕಿಸ್ಥಾನಕ್ಕೆ ಯಾವ ಆತುರವೂ ಇಲ್ಲ. ಮಾತುಕತೆಗೆ ಭಾರತ ಸಿದ್ಧವಾಗುವವರೆಗೆ ನಾವು ನಿರೀಕ್ಷಿಸುತ್ತೇವೆ ಎಂದು ಖುರೇಶಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next