Advertisement

ಗಡಿ ಬಲ ಹೆಚ್ಚಳಕ್ಕೆ 600 ಟ್ಯಾಂಕ್‌ಗಳನ್ನು ಸಂಗ್ರಹಿಸುತ್ತಿರುವ ಪಾಕ್‌

11:05 AM Dec 30, 2018 | |

ಹೊಸದಿಲ್ಲಿ: ಪಾಕಿಸ್ಥಾನ ಭಾರತದ ಗಡಿಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು 600 ಟ್ಯಾಂಕ್‌ಗಳನ್ನು ಸಂಗ್ರಹಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

Advertisement

ಪಾಕ್‌ ಸಂಗ್ರಹಿಸುತ್ತಿರುವ ಟ್ಯಾಂಕ್‌ಗಳು ಮೂರರಿಂದ ನಾಲ್ಕು ಕಿ.ಮೀ ದೂರದ ವರೆಗೆ ಗುರಿ ತಲುಪ ಬಲ್ಲ ಸಾಮರ್ಥ್ಯ ಉಳ್ಳವು ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಯುದ್ಧ ಟ್ಯಾಂಕ್‌ಗಳು ಹೊರತು ಪಡಿಸಿ 250ರಷ್ಟು 150mm SP Mike-10 ಗನ್‌ಗಳನ್ನು ಇಟಲಿಯಿಂದ ತರಿಸಿಕೊಳ್ಳುತ್ತಿದ್ದು, ಈಗಾಗಲೇ 120ನ್ನು ತರಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಪಾಕಿಸ್ಥಾನ ರಷ್ಯಾದಿಂದ ಟಿ-90ಯುದ್ಧ ಟ್ಯಾಂಕ್‌ಗಳನ್ನು ಖರೀದಿಸಲು ಮುಂದಾಗಿದ್ದು, ಮಾಸ್ಕೋದೊಂದಿಗೆ ಆಳವಾದ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.

ಸ್ವಾತಂತ್ರ್ಯದ ನಂತರ ರಷ್ಯಾ ಭಾರತದ ದೊಡ್ಡ ನಂಬಿಕಸ್ಥ ರಕ್ಷಣಾ ಸಲಕರಣೆಗಳ ಸರಬರಾಜುದಾರ ದೇಶವಾಗಿದೆ. 

Advertisement

2025 ರ ವೇಳೆಗೆ ಶಸಸ್ತ್ರ ಪಡೆಗಳನ್ನು ಬಲಪಡಿಸಲು ಹೆಜ್ಜೆ ಇರಿಸಿರುವ ಪಾಕ್‌ ಮಿತ್ರ ರಾಷ್ಟ್ರ ಚೀನಾದಿಂದಲೂ 220 ಟ್ಯಾಂಕ್‌ಗಳನ್ನು ತರಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಭಾರತದ ಬಳಿ ಸದ್ಯ ಪಾಕ್‌ಗಿಂತಲೂ ಉತ್ತಮವಾದ ಟ್ಯಾಂಕ್‌ಗಳಿದ್ದು, ಟಿ-90, ಟಿ-72ಮತ್ತು ಅರ್ಜುನ ಟ್ಯಾಂಕ್‌ಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next