Advertisement

ನಾನೊಬ್ಬ “ಮಜ್ನೂ’ಎಂದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ !

08:13 PM May 28, 2022 | Team Udayavani |

ಲಾಹೋರ್‌: ಹಣಕಾಸು ಅಕ್ರಮ ಸಾಗಣೆ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್ ತಮ್ಮನ್ನು ತಾವು “ಮಜ್ನೂ’ ಎಂದು ಕರೆದುಕೊಂಡಿದ್ದಾರೆ.

Advertisement

12.5 ವರ್ಷಗಳಲ್ಲಿ ನಾನು ಒಂದೇ ಒಂದು ರೂಪಾಯಿಯನ್ನೂ ಸರ್ಕಾರದಿಂದ ಪಡೆದಿಲ್ಲ. ಆದರೆ, ಈ ಪ್ರಕರಣದಲ್ಲಿ ನಾನು 25 ಲಕ್ಷ ರೂ.ಗಳ ಅವ್ಯವಹಾರ ನಡೆಸಿರುವುದಾಗಿ ಆರೋಪಿಸಲಾಗಿದೆ.

ಭಗವಂತನು ನನ್ನನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದ್ದಾನೆ. ಆದರೆ, ನಿಜಕ್ಕೂ ನಾನೊಬ್ಬ ಮಜ್ನೂ(ಮೂರ್ಖ). ಏಕೆಂದರೆ, ನಾನು ನನ್ನ ಕಾನೂನಾತ್ಮಕ ಹಕ್ಕು, ನನ್ನ ವೇತನ, ಸೌಲಭ್ಯಗಳನ್ನು ಸುಖಾಸುಮ್ಮನೆ ತ್ಯಜಿಸಿದೆ ಎಂದು ಶೆಹಬಾಜ್‌ ಹೇಳಿದ್ದಾರೆ.

ಇದೇ ವೇಳೆ, ಕೋರ್ಟ್‌ ಪ್ರಧಾನಿ ಶೆಹಬಾಜ್‌ ಮತ್ತು ಹಮ್ಜಾ ಅವರಿಗೆ ನೀಡಲಾಗಿರುವ ಬಂಧನಪೂರ್ವ ಜಾಮೀನನ್ನು ಜೂ.4ರವರೆಗೆ ವಿಸ್ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next