Advertisement

ODI World Cup ನಲ್ಲಿ ಆಡಲು ಪಾಕ್ ಹಿಂದೇಟು? ಸಮಿತಿ ರಚಿಸಿದ ಪಾಕ್ ಪ್ರಧಾನಿ ಶಹಬಾಜ್ ಷರೀಫ್

03:02 PM Jul 08, 2023 | Team Udayavani |

ಇಸ್ಲಮಾಬಾದ್: ಅಕ್ಟೋಬರ್- ನವೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವ ಬಗ್ಗೆ ಇನ್ನೂ ಖಚಿತವಾಗಿಲ್ಲ.

Advertisement

ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಭಾಗವಹಿಸುವಿಕೆಯನ್ನು ನಿರ್ಧರಿಸಲು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ.

ಸಮಿತಿಯು ತನ್ನ ಶಿಫಾರಸುಗಳನ್ನು ಪ್ರಧಾನಿ ಷರೀಫ್‌ ಗೆ ಸಲ್ಲಿಸುವ ಮೊದಲು ಪಾಕಿಸ್ತಾನ ಮತ್ತು ಭಾರತ ಸಂಬಂಧಗಳ ಎಲ್ಲಾ ಅಂಶಗಳನ್ನು ಪರಿಶೋಧಿಸುತ್ತದೆ ಮತ್ತು ಚರ್ಚಿಸುತ್ತದೆ. ಕ್ರೀಡೆ ಮತ್ತು ನೀತಿಯನ್ನು ಹೊರತುಪಡಿಸಿ ಸರ್ಕಾರದ ನೀತಿ ಮತ್ತು ಆಟಗಾರರು, ಅಧಿಕಾರಿಗಳು, ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಭಾರತದ ಪರಿಸ್ಥಿತಿಯನ್ನು ಸಮಿತಿ ಪರಿಶೀಲನೆ ಮಾಡಲಿದೆ. ಪ್ರಧಾನಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪೋಷಕ-ಮುಖ್ಯಸ್ಥರೂ ಆಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಆತಿಥೇಯ ಬಿಸಿಸಿಐ ಎರಡೂ ಈಗಾಗಲೇ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿವೆ. ಅಕ್ಟೋಬರ್ 5 ರಿಂದ ಪ್ರಾರಂಭವಾಗುವ 50 ಓವರ್‌ಗಳ ವಿಶ್ವಕಪ್ ಕೂಟವು ಅಹಮದಾಬಾದ್ ನಲ್ಲಿ ಉದ್ಘಾಟನೆಯಾಗಲಿದೆ.

ಆದರೆ, ಉಭಯ ದೇಶಗಳ ನಡುವಿನ ಉದ್ವಿಗ್ನ ಸಂಬಂಧಗಳಿಂದಾಗಿ ರಾಷ್ಟ್ರೀಯ ತಂಡವು ವಿಶ್ವಕಪ್ ಈವೆಂಟ್‌ ನಲ್ಲಿ ಭಾಗವಹಿಸುವುದು ಸರ್ಕಾರದ ಅನುಮತಿಗೆ ಒಳಪಟ್ಟಿರುತ್ತದೆ ಎಂದು ಪಿಸಿಬಿಯು ಐಸಿಸಿ ಮತ್ತು ಬಿಸಿಸಿಐಗೆ ತಿಳಿಸಿತ್ತು.

Advertisement

ಇದನ್ನೂ ಓದಿ:ಬಂಗಾಳ ಚುನಾವಣಾ ಹಿಂಸಾಚಾರ: ಸ್ವತಂತ್ರ ಅಭ್ಯರ್ಥಿಯ ಮಗಳ ಹಣೆಗೆ ಗುಂಡು ಹಾರಿಸಿದ ದುಷ್ಕರ್ಮಿಗಳು

ಸಮಿತಿಯ ಇತರ ಸದಸ್ಯರಲ್ಲಿ ಕ್ರೀಡಾ ಸಚಿವ ಅಹ್ಸಾನ್ ಮಜಾರಿ, ಮರ್ಯಮ್ ಔರಂಗಜೇಬ್, ಅಸದ್ ಮಹಮೂದ್, ಅಮೀನ್ ಉಲ್ ಹಕ್, ಖಮರ್ ಜಮಾನ್ ಕೈರಾ ಮತ್ತು ಮಾಜಿ ರಾಜತಾಂತ್ರಿಕ ತಾರಿಕ್ ಫಾತ್ಮಿ ಸೇರಿದ್ದಾರೆ.

ಪಾಕಿಸ್ತಾನದ ಪಂದ್ಯಗಳು ನಿಗದಿಯಾಗಿರುವ ಸ್ಥಳಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಭದ್ರತಾ ನಿಯೋಗವನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಸಂಬಂಧಪಟ್ಟ ಸಚಿವರು ಈಗಾಗಲೇ ಪಿಸಿಬಿಗೆ ಸೂಚಿಸಿದ್ದಾರೆ.

ಮಂಡಳಿಯ ಹಂಗಾಮಿ ಅಧ್ಯಕ್ಷ ಝಾಕಾ ಅಶ್ರಫ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ತಸೀರ್ ಅವರು ಐಸಿಸಿ ಸಭೆಗಳಲ್ಲಿ ಪಾಲ್ಗೊಳ್ಳಲು ಶನಿವಾರ ರಾತ್ರಿ ಡರ್ಬನ್‌ಗೆ ತೆರಳಲಿದ್ದಾರೆ, ಅಲ್ಲಿ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನಕ್ಕೆ ತನ್ನ ತಂಡವನ್ನು ಕಳುಹಿಸಲು ಭಾರತ ಪದೇ ಪದೇ ನಿರಾಕರಿಸುತ್ತಿರುವ ಬಗ್ಗೆ ಅಶ್ರಫ್ ಚರ್ಚಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next