Advertisement

ಖಾನ್‌ ಪ್ರಮಾಣ ಸರಳ; ವಿದೇಶೀ ಗಣ್ಯರಿಲ್ಲ

06:00 AM Aug 03, 2018 | Team Udayavani |

ಚಂಡೀಗಢ/ಇಸ್ಲಾಮಾಬಾದ್‌: ಪಾಕಿಸ್ಥಾನದ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ರ ಆ.11ರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸರಳವಾಗಿ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವುದೇ ರಾಷ್ಟ್ರದ ಸರ್ಕಾರಿ ಮುಖ್ಯಸ್ಥರಿಗೆ ಆಹ್ವಾನ ನೀಡದೇ ಇರಲು ನಿರ್ಧರಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಹೇಳಿದೆ. ಈಗಾಗಲೇ ನಟ-ನಿರ್ಮಾಪಕ ಅಮೀರ್‌ ಖಾನ್‌, ಮಾಜಿ ಕ್ರಿಕೆಟಿಗರಾದ ಸುನೀಲ್‌ ಗವಾಸ್ಕರ್‌, ಕಪಿಲ್‌ ದೇವ್‌ಗೆ ಆಹ್ವಾನ ನೀಡಲಾಗಿದೆ. ಆದರೆ ತಮಗೆ ಆಹ್ವಾನ ತಲುಪಿಯೇ ಇಲ್ಲವೆಂದಿದ್ದಾರೆ ಅಮೀರ್‌ ಖಾನ್‌. 

Advertisement

ಗ್ರೀಕ್‌ ದೇವತೆ: ಇದೇ ವೇಳೆ ಪಂಜಾಬ್‌ ಸಚಿವ ನವ್‌ಜೋತ್‌ ಸಿಂಗ್‌ ಸಿಧು, ಇಮ್ರಾನ್‌ ಖಾನ್‌ ಅವರನ್ನು ನಾನು ಮೊದಲಿಗೆ ನೋಡಿದಾಗ ಗ್ರೀಕ್‌ ದೇವತೆಯಂತೆ ಕಂಡಿದ್ದರು. ಅವರಿಂದ ಭಾರತ-ಪಾಕ್‌ ಸಂಬಂಧದಲ್ಲಿ ಹೊಸ ಬೆಳಕು ಮೂಡಲಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next