ನವದೆಹಲಿ: ಪಾಕಿಸ್ತಾನದ ಆಂತರಿಕ ಗುಪ್ತಚರ ಇಲಾಖೆ(ಐಎಸ್ಐ) ಭಾರತದ ಪಂಜಾಬ್ ಮತ್ತು ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ರೈಲ್ವೆ ಹಳಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಹೊಂಚು ಹಾಕುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆಯು ಸರ್ಕಾರಕ್ಕೆ ಎಚ್ಚರಿಸಿದೆ.
ಭಾರತದಲ್ಲಿರುವ ಐಎಸ್ಐ ನಿರ್ವಾಹಕರು, ಪಂಜಾಬ್ ಮತ್ತು ಸುತ್ತಲಿನ ರಾಜ್ಯಗಳಲ್ಲಿ ರೈಲು ಹಳಿಗಳನ್ನು ಸ್ಫೋಟಿಸಲು ಯತ್ನಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕಲ್ಲಿದ್ದಲು ಹಾಗೂ ಇನ್ನಿತರ ವಸ್ತುಗಳನ್ನು ಹೊತ್ತು ಸಾಗುವ ಸರಕು ರೈಲುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಲಾಗುತ್ತಿದೆ. ಈ ಕಾರ್ಯಾಚರಣೆಗೆಂದೇ ಐಎಸ್ಐ ನಿರ್ವಾಹಕರಿಗೆ ಅಪಾರ ಪ್ರಮಾಣದಲ್ಲಿ ಹಣ ಪೂರೈಕೆ ಮಾಡುತ್ತಿದೆ.
ಇದನ್ನೂ ಓದಿ:ಪಾಕಿಸ್ತಾನ: ಇಂಧನ ಉಳಿಸಲು ಕೆಲಸದ ದಿನಕ್ಕೆ ಕತ್ತರಿ!
ಭಾರತದಲ್ಲಿ ಉಗ್ರ ಕಾರ್ಯಾಚರಣೆಗಳನ್ನು ನಡೆಸಲು ಇಲ್ಲಿರುವ ಪಾಕ್ ಸ್ಲೀಪರ್ ಸೆಲ್ಗೆ ದೊಡ್ಡ ಪ್ರಮಾಣ ಹಣವನ್ನು ಹಂಚಲಾಗುತ್ತಿದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.