Advertisement

ಪಾಕ್‌ ತಂಡದಿಂದ ವೇಗಿ ಮೊಹಮ್ಮದ್‌ ಆಮಿರ್‌ ಔಟ್‌

11:04 PM Apr 18, 2019 | Sriram |

ಲಾಹೋರ್‌: ಪಾಕಿಸ್ಥಾನದ ಏಕದಿನ ವಿಶ್ವಕಪ್‌ ತಂಡ ಪ್ರಕಟಗೊಂಡಿದ್ದು, ಇದರಲ್ಲಿ ಅಚ್ಚರಿಯೊಂದು ಕಾಣಿಸಿದೆ. ಅನುಭವಿ ಎಡಗೈ ವೇಗಿ ಮೊಹಮ್ಮದ್‌ ಆಮಿರ್‌ ಅವರನ್ನು ಹೊರಗಿರಿಸಲಾಗಿದೆ. ಅವರು ಕೇವಲ ಮೀಸಲು ಆಟಗಾರನಾಗಿದ್ದಾರೆ.

Advertisement

ತಂಡವನ್ನು ಪ್ರಕಟಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಇಂಝಮಾಮ್‌ ಉಲ್‌ ಹಕ್‌, “ಈ ತಂಡದ 11 ಆಟಗಾರರು 2017ರ ಚಾಂಪಿಯನ್ಸ್‌ ಟ್ರೋಫಿ ವಿಜೇತ ತಂಡದ ಸದಸ್ಯರೇ ಆಗಿದ್ದಾರೆ. ಇಬ್ಬರು ಮೀಸಲು ಆಟಗಾರೂ ಇದ್ದಾರೆ. ಈ ಪಂದ್ಯಾವಳಿಯಲ್ಲಿ ಪಾಕಿಸ್ಥಾನ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ನಮ್ಮೆಲ್ಲರದು…’ ಎಂದರು.

14 ಪಂದ್ಯ, ಕೇವಲ 5 ವಿಕೆಟ್‌
ಮೊಹಮ್ಮದ್‌ ಆಮಿರ್‌ ಕಳೆದ 14 ಏಕದಿನಗಳಲ್ಲಿ ಕೇವಲ 5 ವಿಕೆಟ್‌ ಉರುಳಿಸಿ ಕಳಪೆ ಫಾರ್ಮ್ ಪ್ರದರ್ಶಿಸಿದ್ದೇ ವಿಶ್ವಕಪ್‌ನಿಂದ ಹೊರಬೀಳಲು ಕಾರಣ ಎನ್ನಲಾಗಿದೆ. ಅನುಭವಿ ಆಟಗಾರರಾದ ಶೋಯಿಬ್‌ ಮಲಿಕ್‌ ಮತ್ತು ಮೊಹಮ್ಮದ್‌ ಹಫೀಜ್‌ ಮೇಲೆ ಆಯ್ಕೆ ಸಮಿತಿ ವಿಶ್ವಾಸವಿರಿಸಿತು.ಪಾಕಿಸ್ಥಾನ ತಂಡವನ್ನು ಸಫ‌ìರಾಜ್‌ ಅಹ್ಮದ್‌ ಮುನ್ನಡೆಸಲಿದ್ದಾರೆ.

ಪಾಕಿಸ್ಥಾನ ತಂಡ
ಸಫ‌ìರಾಜ್‌ ಅಹ್ಮದ್‌ (ನಾಯಕ), ಫ‌ಕಾರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಅಬಿದ್‌ ಅಲಿ, ಬಾಬರ್‌ ಆಜಮ್‌, ಶೋಯಿಬ್‌ ಮಲಿಕ್‌, ಹ್ಯಾರಿಸ್‌ ಸೊಹೈಲ್‌, ಮೊಹಮ್ಮದ್‌ ಹಫೀಜ್‌, ಶಾದಾಬ್‌ ಖಾನ್‌, ಇಮಾದ್‌ ವಾಸಿಮ್‌, ಹಸನ್‌ ಅಲಿ, ಫಾಹಿಮ್‌ ಅಶ್ರಫ್, ಶಹೀನ್‌ ಶಾ ಅಫ್ರಿದಿ, ಜುನೇದ್‌ ಖಾನ್‌, ಮೊಹಮ್ಮದ್‌ ಹಸ್ನೆ„ನ್‌.
ಮೀಸಲು ಆಟಗಾರರು: ಆಸಿಫ್ ಅಲಿ, ಮೊಹಮ್ಮದ್‌ ಆಮಿರ್‌.

Advertisement

Udayavani is now on Telegram. Click here to join our channel and stay updated with the latest news.

Next