Advertisement

ಕುಲಭೂಷಣ್ ಜಾಧವ್ ಭೇಟಿಗೆ ಗ್ರೀನ್ ಸಿಗ್ನಲ್, ಪಾಕ್ ಅನುಮತಿ ಪರಿಶೀಲಿಸುತ್ತಿದ್ದೇವೆ: ಭಾರತ

09:28 AM Aug 02, 2019 | Team Udayavani |

ಇಸ್ಲಾಮಾಬಾದ್: ಭಾರತೀಯ ನೌಕಾದಳದ ಕಮಾಂಡರ್ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ರಾಜತಾಂತ್ರಿಕ ಸಂಪರ್ಕಕ್ಕಾಗಿ ಗುರುವಾರ ಅನುಮತಿ ನೀಡಿದೆ ಎಂದು ವರದಿ ತಿಳಿಸಿದೆ.

Advertisement

ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರ ಮಾಹಿತಿ ಪ್ರಕಾರ, ಆಗಸ್ಟ್ 2ರಂದು ಜಾಧವ್ ಅವರ ಜತೆ ಸಂವಹನ ನಡೆಸಲು ಅನುಮತಿ ನೀಡುವ ನಿರ್ಧಾರವನ್ನು ಘೋಷಿಸಿದ್ದೇವೆ. ನಾವೀಗ ಭಾರತದ ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದೆ.

ಕಲುಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಇತ್ತೀಚೆಗೆ ಭಾರತದ ಪರ ತೀರ್ಪು ನೀಡಿತ್ತು. ಅಲ್ಲದೇ ಜಾಧವ್ ಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸಬೇಕು ಎಂದು ಆದೇಶಿಸಿದ್ದ ಅಂತಾರಾಷ್ಟ್ರೀಯ ಕೋರ್ಟ, ಪ್ರಕರಣವನ್ನು ಪುನಃ ಪರಿಶೀಲಿಸುವಂತೆ ಪಾಕಿಸ್ತಾನಕ್ಕೆ ಸೂಚನೆ ನೀಡಿ, ಗಲ್ಲುಶಿಕ್ಷೆಗೆ ತಡೆ ನೀಡಿತ್ತು.

ಈ ಬೆಳವಣಿಗೆ ನಂತರ ಪಾಕಿಸ್ತಾನ ಜಾಧವ್ ಪರ ರಾಜತಾಂತ್ರಿಕ ಸಂಪರ್ಕ ಕಲ್ಪಿಸಲು ಒಪ್ಪಿಗೆ ನೀಡಿದ ಎರಡು ವಾರಗಳ ಬಳಿಕ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ ಎಂದು ವರದಿ ವಿವರಿಸಿದೆ.

ಪಾಕ್ ಅನುಮತಿ ಪರಿಶೀಲಿಸುತ್ತಿದ್ದೇವೆ: ಭಾರತ

Advertisement

ಸುಳ್ಳು ಆರೋಪದಡಿ ಪಾಕಿಸ್ತಾನದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಭಾರತೀಯ ಪ್ರಜೆ, ನೌಕಾದಳದ ಮಾಜಿ ಕಮಾಂಡರ್ ಕುಲಭೂಷಣ್ ಜಾಧವ್ ಅವರ ರಾಜತಾಂತ್ರಿಕ ಸಂಪರ್ಕಕ್ಕೆ ಪಾಕಿಸ್ತಾನಕ್ಕೆ ಅನುಮತಿ ನೀಡಿರುವುದನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಖಚಿತಪಡಿಸಿದೆ ಎಂದು ವರದಿ ತಿಳಿಸಿದೆ.

ಕುಲಭೂಷಣ್ ಜಾಧವ್ ಜತೆಗಿನ ರಾಜತಾಂತ್ರಿಕ ಸಂಪರ್ಕದ ಕುರಿತು ಪಾಕಿಸ್ತಾನದ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದು, ರಾಜತಾಂತ್ರಿಕತೆ ಮೂಲಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಭಾರತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next