ನವದೆಹಲಿ/ಇಸ್ಲಾಮಾಬಾದ್:ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘನೆ, ಉಗ್ರರನ್ನು ಜಮ್ಮು-ಕಾಶ್ಮೀರಕ್ಕೆ ನುಸುಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ಪಾಕಿಸ್ತಾನ ಇದೀಗ ಭಾರತಕ್ಕೆ ಕೋವಿಡ್ 19 ವೈರಸ್ ಪೀಡಿತ ರೋಗಿಗಳನ್ನು ರಫ್ತು ಮಾಡುತ್ತಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಗ್ ಸಿಂಗ್ ಬುಧವಾರ ಆರೋಪಿಸಿದ್ದಾರೆ.
ಇದೊಂದು ಕಳವಳಕಾರಿ ವಿಚಾರ ಎಂದು ಹೇಳಿರುವ ಸಿಂಗ್, ಇದರಿಂದ ಪಾಕಿಸ್ತಾನದ ಮತ್ತೊಂದು ಕರಾಳ ಮುಖ ಬಯಲಾಗಿದೆ. ಈ ಮೊದಲು ಉಗ್ರರನ್ನು ಕಳುಹಿಸುತ್ತಿದ್ದ ಪಾಕಿಸ್ತಾನ ಈಗ ಕೋವಿಡ್ 19 ಸೋಂಕಿತರನ್ನು ಕಳುಹಿಸಲು ಆರಂಭಿಸಿದೆ ಎಂದು ತಿಳಿಸಿದ್ದಾರೆ.
ಈ ವ್ಯಕ್ತಿಗಳು ಸೋಂಕನ್ನು ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗಿದೆ. ಪಾಕಿಸ್ತಾನ ಕೋವಿಡ್ 19 ವೈರಸ್ ಪೀಡಿತ ರೋಗಿಗಳನ್ನು ಕಳುಹಿಸುತ್ತಿದೆ. ಇದು ಸತ್ಯವಾದ ವಿಷಯ ಎಂದು ಸಿಂಗ್ ಹೇಳಿದ್ದಾರೆ.
ಈವರೆಗೂ ಪಾಕಿಸ್ತಾನ ಉಗ್ರರನ್ನು ರಫ್ತು ಮಾಡುತ್ತಿತ್ತು. ಆದರೆ ಈಗ ಪಾಕಿಸ್ತಾನ ಕೋವಿಡ್ 19 ರೋಗಿಗಳನ್ನು ರಫ್ತು ಮಾಡಲು
ಆರಂಭಿಸಿದೆ. ಅವರೆಲ್ಲಾ ಇಲ್ಲಿಗೆ ಬಂದು ಇಲ್ಲಿರುವ ಜನರಿಗೆ ಸೋಂಕು ಹರಡಿಸುತ್ತಿದ್ದಾರೆ. ಈ ಬಗ್ಗೆ ಮುನ್ನೆಚ್ಚರಿಕೆಯ ಅಗತ್ಯವಿದೆ ಎಂದು
ಡಿಜಿಪಿ ತಿಳಿಸಿದ್ದಾರೆ.
ಇಡೀ ಜಗತ್ತು ಮಾರಣಾಂತಿಕ ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿದೆ. ಆದರೆ ಪಾಖಿಸ್ತಾನ ಮಾತ್ರ ಭಾರತದ ವಿರುದ್ಧ ದುಷ್ಟ
ಮಾರ್ಗದ ನಡವಳಿಕೆಯನ್ನು ಮುಂದುವರಿಸಿದೆ. ಪ್ರತಿದಿನ ಗಡಿನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸುತ್ತಿರುವ
ಪಾಕಿಸ್ತಾನ, ಜಮ್ಮು ಕಾಶ್ಮೀರದೊಳಕ್ಕೆ ಉಗ್ರರನ್ನು ಕಳುಹಿಸುತ್ತಿದೆ ಎಂದು ವರದಿ ತಿಳಿಸಿದೆ.