Advertisement
ಬುಧವಾರ ಹೊನಲು ಬೆಳಕಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ನ್ಯೂಜಿಲ್ಯಾಂಡ್ 9 ವಿಕೆಟಿಗೆ 266 ರನ್ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಪಾಕಿಸ್ಥಾನ 47.2 ಓವರ್‌ಗಳಲ್ಲಿ 219ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಟ್ರೆಂಟ್ ಬೌಲ್ಟ್ ತಮ್ಮ ಮೊದಲ ಓವರಿನಲ್ಲೇ (ಇನ್ನಿಂಗ್ಸಿನ 2ನೇ ಓವರ್) ಘಾತಕವಾಗಿ ಎರಗಿ ಹ್ಯಾಟ್ರಿಕ್ ಸಾಧಿಸಿದರು. ಓವರಿನ 2ನೇ, 3ನೇ ಹಾಗೂ 4ನೇ ಎಸೆತಗಳಲ್ಲಿ ಕ್ರಮವಾಗಿ ಫಕಾರ್ ಜಮಾನ್ (1), ಬಾಬರ್ ಆಜಂ (0) ಮತ್ತು ಮೊಹಮ್ಮದ್ ಹಫೀಜ್ (0) ಅವರನ್ನು ಪೆವಿಲಿಯನ್ನಿಗೆ ಅಟ್ಟಿ ಈ ಸಾಧನೆಗೈದರು. ಫಕಾರ್ ಜಮಾನ್ ಕ್ಲೀನ್‌ಬೌಲ್ಡ್ ಆದರೆ, ಬಾಬರ್ ಆಜಂ ಟಯ್ಲರ್‌ಗೆ ಕ್ಯಾಚಿತ್ತರು. ಹಫೀಜ್ ಲೆಗ್ ಬಿಫೋರ್ ಬಲೆಗೆ ಬಿದ್ದರು. ಹೀಗೆ 2.4 ಓವರ್ ಆಗುವಷ್ಟರಲ್ಲಿ 8 ರನ್ನಿಗೆ ಪಾಕಿಸ್ಥಾನದ 3 ವಿಕೆಟ್ ಉದುರಿ ಹೋಯಿತು. ಬಳಿಕ ಇಮಾಮ್ ಉಲ್ ಹಕ್ (34), ಶೋಯಿಬ್ ಮಲಿಕ್ (30) 4ನೇ ವಿಕೆಟಿಗೆ 63 ರನ್ ಜತೆಯಾಟ ನಿಭಾಯಿಸಿ ಕುಸಿತಕ್ಕೆ ತಡೆಯಾದರು. ಈ ಹಂತದಲ್ಲಿ ಮತ್ತೂಂದು ಕುಸಿತ ಅನುಭವಿಸಿದ ಪಾಕ್ 85 ರನ್ನಿಗೆ 6 ವಿಕೆಟ್ ಕಳೆದುಕೊಂಡು ದೊಡ್ಡ ಸೋಲಿನ ಸೂಚನೆ ನೀಡಿತು. ಆದರೆ 7ನೇ ವಿಕೆಟಿಗೆ ಒಟ್ಟುಗೂಡಿದ ನಾಯಕ ಸಫìರಾಜ್ ಅಹ್ಮದ್ (64) ಮತ್ತು ಇಮಾದ್ ವಾಸಿಮ್ (50) 103 ರನ್ ಜತೆಯಾಟ ನಡೆಸಿ ತಂಡವನ್ನು ಹೀನಾಯ ಸ್ಥಿತಿಯಿಂದ ಪಾರುಮಾಡಿದರು. ಲಾಕಿ ಫರ್ಗ್ಯುಸನ್ ಕೂಡ 3 ವಿಕೆಟ್ ಕಿತ್ತರು.
Related Articles
Advertisement
ಸಂಕ್ಷಿಪ್ತ ಸ್ಕೋರ್ ನ್ಯೂಜಿಲ್ಯಾಂಡ್-9 ವಿಕೆಟಿಗೆ 266 (ಟಯ್ಲರ್ 80, ಲ್ಯಾಥಂ 68, ಶಾದಾಬ್ 38ಕ್ಕೆ 4, ಅಫ್ರಿದಿ 46ಕ್ಕೆ 4). ಪಾಕಿಸ್ಥಾನ-47.2 ಓವರ್‌ಗಳಲ್ಲಿ 219 ಆಲೌಟ್ (ಸಫìರಾಜ್ 64, ಇಮಾದ್ 50, ಬೌಲ್ಟ್ 54ಕ್ಕೆ 3, ಫರ್ಗ್ಯುಸನ್ 36ಕ್ಕೆ 3, ಗ್ರ್ಯಾಂರ್ಡ್‌ಹೋಮ್ 40ಕ್ಕೆ 2). ಪಂದ್ಯಶ್ರೇಷ್ಠ: ಟ್ರೆಂಟ್ ಬೌಲ್ಟ್.