Advertisement

ಪಾಕಿಗೆ ಈಗಲೂ IAF ದಾಳಿ ಭೀತಿ: ಎಫ್16 ಫೈಟರ್‌ ಜೆಟ್‌ಗಳು ಮುಂಚೂಣಿ ನೆಲೆಗೆ

09:11 AM May 21, 2019 | Sathish malya |

ಹೊಸದಿಲ್ಲಿ : ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿನ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್‌ ದಾಳಿ ನಡೆಸಿ ಅಪಾರ ನಾಶ ನಷ್ಟ ಉಂಟು ಮಾಡಿದ 75 ದಿನಗಳ ಬಳಿಕವೂ ಪಾಕಿಸ್ಥಾನಕ್ಕೆ ತನ್ನ ಎಫ್16 ಯುದ್ಧ ವಿಮಾನಗಳ ಸುರಕ್ಷೆಯ ಭೀತಿ ಇನ್ನೂ ಕಡಿಮೆಯಾಗಿಲ್ಲ.

Advertisement

ಇದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ಥಾನ, ಸರ್ಗೋಧ, ಪಂಜಾಬ್‌ ಮತ್ತು ಸಿಂಧ್‌ ನಲ್ಲಿನ ತವರು ನೆಲೆಯಿಂದ ಎಫ್16 ಯುದ್ಧ ವಿಮಾನಗಳನ್ನು ಹೊರ ತೆಗೆದು ಅವುಗಳನ್ನು ಬೇರೆ ಬೇರೆ ಉಪ ನೆಲೆಗಳಲ್ಲಿ ಹರಡಿಟ್ಟ ರೀತಿಯಲ್ಲಿ ಸಜ್ಜು ಗೊಳಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಒಂದೊಮ್ಮೆ ಭಾರತಿಯ ವಾಯು ಪಡೆ ಮತ್ತೂಮ್ಮೆ ದೊಡ್ಡ ಮಟ್ಟದಲ್ಲಿ ದಾಳಿ ಮಾಡಿದರೆ ತನ್ನೆಲ್ಲ ಎಫ್16 ವಿಮಾನಗಳು ನಾಶಾವಾದಾವು ಎಂಬ ಭೀತಿಯಲ್ಲಿ ಪಾಕಿಸ್ಥಾನ ಈ ಮುಂಚೂಣಿ ಹಾಗೂ ಪರಿಣಾಮಕಾರಿ ಯುದ್ಧ ವಿಮಾನಗಳನ್ನು ಅವುಗಳ ತವರು ನೆಲೆಯಿಂದ ಹೊರ ತೆಗೆದು ಪ್ರತ್ಯೇಕ ವಾಯು ಪಟ್ಟಿಗಳಲ್ಲಿ ಹರಡಿದಂತೆ ಇರಿಸಿದೆ ಎಂದು ಮೂಲಗಳು ಹೇಳಿವೆ.

ಬಾಲಾಕೋಟ್‌ ಮೇಲೆ ಐಎಎಫ್ ದಾಳಿ ನಡೆದಿದ್ದಾಗ ಅದನ್ನು ಮುಂಚಿತವಾಗಿ ಗ್ರಹಿಸುವಲ್ಲಿ ಮತ್ತು ತಡೆಯುವಲ್ಲಿ ಸಂಪೂರ್ಣವಾಗಿ ವಿಫ‌ಲವಾದ ಬಳಿಕದಲ್ಲಿ ಪಾಕಿಸ್ಥಾನ ತನ್ನ ಯುದ್ಧ ವಿಮಾನಗಳನ್ನು ಅಂತಾರಾಷ್ಟ್ರೀಯ ಗಡಿ ಮತ್ತು ಎಲ್‌ಓಸಿಯ ಉದ್ದಕ್ಕೂ ಕಟ್ಟೆಚ್ಚರದಲ್ಲಿ ಇರಿಸಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next