Advertisement

ವಿಶ್ವಸಂಸ್ಥೆಯಲ್ಲಿ  ಪಾಕ್‌ ಮಾನ ಹರಾಜು ಹಾಕಿದ ದಿಟ್ಟೆ !

10:14 AM Sep 22, 2017 | |

ಹೊಸದಿಲ್ಲಿ: ‘ಕಿರು ವ್ಯಾಪ್ತಿಯ ಅಣ್ವಸ್ತ್ರಗಳನ್ನು ಭಾರತೀಯ ಸೇನೆಯ ವಿರುದ್ಧ ಬಳಸುತ್ತೇವೆ’ ಎಂದ ಪಾಕ್‌ ಪ್ರಧಾನಿ ಶಾಹೀದ್‌ ಖಕಾನ್‌ ಅಬ್ಬಾಸಿ ಬೆದರಿಕೆಗೆ  ವಿಶ್ವಸಂಸ್ಥೆಯಲ್ಲಿ ದಿಟ್ಟ ತಿರುಗೇಟು ನೀಡಿರುವ ಭಾರತ ಪಾಕಿಸ್ಥಾನವನ್ನು ‘ಟೆರರಿಸ್ಥಾನ್‌’ ಎಂದು ಕರೆದಿದೆ. 

Advertisement

ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡತನಾಡಿದ ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಯೆನಾಮ್‌ ಗಂಭೀರ್‌ ‘ಪಾಕಿಸ್ಥಾನ ಭೌಗೋಳಿಕವಾಗಿ ಉಗ್ರವಾದದ ಸಮನಾರ್ಥಕವಾಗಿ ಗುರುತಿಸಿಕೊಂಡಿದೆ. ಅದೀಗ ”ಟೆರರಿಸ್ಥಾನ್‌” ಆಗಿದ್ದು ಉಗ್ರರ ಕಾರ್ಖಾನೆಗಳಲ್ಲಿ ಉಗ್ರರನ್ನು ಉತ್ಪಾದನೆ ಮಾಡಿ ಜಗತ್ತಿಗೆ ರಫ್ತು ಮಾಡುತ್ತಿದೆ’ಎಂದು ಕಿಡಿ ಕಾರಿದ್ದಾರೆ. 

ಒಸಮಾ ಬಿನ್‌ ಲಾಡೆನ್‌, ಮುಲ್ಲಾ ಓವರ್‌ಗೆ ರಕ್ಷಣೆ ನೀಡಿದ ದೇಶ, 26/11 ದಾಳಿಯ ಮಾಸ್ಟರ್‌ಮೈಂಡ್‌ ಹಫೀಜ್‌ ಸಯೀದ್‌ ಪಾಕ್‌ನಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಜಾಗತಿಕ ಉಗ್ರರನ್ನು ಉತ್ಪಾದಿಸುವುದು ಪಾಕಿಸ್ಥಾನದ ಮುಖ್ಯ ಗುರಿಯಾಗಿದ್ದು, ಉಗ್ರರಿಗೆ ಸುರಕ್ಷಿತ ತಾಣಗಳನ್ನು ನೀಡುತ್ತಿದೆ. ಉಗ್ರ ಸಂಘಟನೆಗಳ ಮುಖಂಡರು ಪಾಕ್‌ ಮಿಲಿಟರಿ ಮತ್ತು ರಾಜಕಾರಣಿಗಳೊಂದಿಗೆ ಉತ್ತಮ ನಂಟು ಹೊಂದಿದ್ದಾರೆ’ ಎಂದು ಪಾಕ್‌ ಮಾನ ಹರಾಜು ಹಾಕಿದ್ದಾರೆ.  

‘ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಪಾಕಿಸ್ಥಾನ ನೆನಪಿನಲ್ಲಿಡಲಿ. ಉಗ್ರರನ್ನು ನುಸುಳಿ ಬಿಡುವ ಮೂಲಕ ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಕೆಳಮಟ್ಟಕ್ಕಿಳಿಸಲು ಎಂದಿಗೂ ಅಸಾಧ್ಯವಾದ ಮಾತು’ ಎಂದು ಎಚ್ಚರಿಕೆ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next