Advertisement

ಸಂಸದೆಗೆ ಪಾಕ್‌ ಗೌರವ

12:30 AM Mar 09, 2019 | |

ಇಸ್ಲಾಮಾಬಾದ್‌: ಪಾಕಿಸ್ಥಾನದ ಸಂಸತ್‌ ಸದಸ್ಯರಾಗಿ ಆಯ್ಕೆಯಾದ ಮೊಟ್ಟ ಮೊದಲ ಹಿಂದೂ ದಲಿತ ಮಹಿಳೆ ಕೃಷ್ಣಾ ಕುಮಾರಿ ಕೊಹ್ಲಿ (40) ಅವರಿಗೆ, ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾ. 8ರಂದು, ಪಾಕ್‌ ಸಂಸತ್ತಿನ ಮೇಲ್ಮನೆಯ ಅಧ್ಯಕ್ಷ ಸ್ಥಾನದಲ್ಲಿ ಕೂರುವ ಅವಕಾಶ ಕಲ್ಪಿಸುವ ಮೂಲಕ ಪಾಕ್‌ ಸಂಸತ್‌ ವಿಶೇಷ ಗೌರವ ನೀಡಿದೆ. ಇದಕ್ಕೆ ಟ್ವಿಟರ್‌ನಲ್ಲಿ ಸಂಸತ ವ್ಯಕ್ತಪಡಿಸಿರುವ ಪಾಕ್‌ ಸಂಸದ ಫೈಸಲ್‌ ಜಾವೇದ್‌, ಮಹಿಳಾ ದಿನವನ್ನು ಮತ್ತಷ್ಟು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಸಂಸತ್ತಿನ ಕಾರ್ಯದರ್ಶಿಗಳು, ಕೃಷ್ಣ ಕುಮಾರಿ ಅಲಿಸಾಯ್‌ ಕಿಶೂ ಬಾಯಿ ಅವರಿಗೆ ಮೇಲ್ಮನೆಯ ಸಭಾಪತಿ ಸ್ಥಾನವನ್ನು ಒಂದು ದಿನದ ಮಟ್ಟಿಗೆ ನೀಡಲು ನಿರ್ಧರಿಸಿದ್ದರು ಎಂದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next