ಕರಾಚಿ: ಪಾಕಿಸ್ತಾನದಲ್ಲಿ ಬಹುಸಂಖ್ಯಾತ ಕುಟುಂಬಕ್ಕೆ ಸೇರಿದ ಅಬ್ದುಲ್ ಜಬ್ಟಾರ್ ಎಂಬಾತನಿಂದ ಅಪಹೃತವಾಗಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡು ಆನಂತರ ಅದೇ ವ್ಯಕ್ತಿಯೊಂದಿಗೆ ಬಲವಂತದ ಮದುವೆಯನ್ನೂ ಮಾಡಿಕೊಂಡಿರುವ 14ರ ಹರೆಯದ ಹುಮಾ ಎಂಬ ಕ್ರೈಸ್ತ ಧರ್ಮೀಯ ಬಾಲಕಿಗೆ ನ್ಯಾಯ ಒದಗಿಸಬೇಕಿದ್ದ ಸಿಂಧ್ ಹೈಕೋರ್ಟ್, ಗಾಯದ ಮೇಲೆ ಬರೆ ಎಳೆದಂತೆ ತೀರ್ಪಿತ್ತಿದೆ.
“ಮದುವೆ ನಡೆಯುವ ಮುನ್ನವೇ ಆಕೆ ಋತುಮತಿಯಾಗಿದ್ದರಿಂದ, ಶರಿಯಾ ಕಾನೂನಿನನ್ವಯ ಆ ವಿವಾಹ ಕಾನೂನುಬದ್ಧ’ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ಮೂಲಕ, ಕಾನೂನಿನ ಚೌಕಟ್ಟಿನಲ್ಲಿ ತನಗೆ ನ್ಯಾಯ ದೊರಕಬಹುದು ಎಂದು ಕಾಯುತ್ತಿದ್ದ ಬಾಲಕಿಯ ನಿರೀಕ್ಷೆ ಹುಸಿಯಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಆಕೆಯ ಅಪಹರಣವಾಗಿತ್ತು.
ತೀರ್ಪು ಹೊರಬಿದ್ದ ನಂತರ ಮಾತನಾಡಿದ ಬಾಲಕಿ ಪರ ವಕೀಲರಾದ ತಬಸ್ಸಮ್ ಯೂಸುಫ್, “”ಈ ತೀರ್ಪು ಪಾಕಿಸ್ತಾನದ 2014ರ ಬಾಲ ವಿವಾಹ ಕಾಯ್ದೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ, ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದೇವೆ” ಎಂದಿದ್ದಾರೆ.
ಮತ್ತೂಂದೆಡೆ, ಬಾಲಕಿಯ ತಾಯಿ ನಗೀಮಾ ಅವರು “ಇಂಡಿಪೆಂಡೆಂಟ್ ಕ್ಯಾಥೋಲಿಕ್ ನ್ಯೂಸ್’ ವೆಬ್‌ಸೈಟ್‌ನ ಮೂಲಕ ತಮ್ಮ ಕುಟುಂಬಕ್ಕೆ ಬೆಂಬಲ ನೀಡುವಂತೆ ಅಂತಾರಾಷ್ಟ್ರೀಯ ಕ್ರೈಸ್ತ ಸಮುದಾಯಕ್ಕೆ ಮನವಿ ಸಲ್ಲಿಸಿದ್ದಾರೆ.
– ಕಳೆದ ಅಕ್ಟೋಬರ್‌ನಲ್ಲಿ ಅಪಹರಣಗೊಂಡು, ಬಲವಂತವಾಗಿ ಮತಾಂತರಗೊಂಡಿದ್ದ ಹುಮಾ ಎಂಬ ಕ್ರೈಸ್ತ ಬಾಲಕಿ.
– ಮದುವೆಗೂ ಮುನ್ನ ಆಕೆ ಋತುಮತಿಯಾಗಿದ್ದರಿಂದ ಮದುವೆ ಕಾನೂನು ಬಾಹಿರವಲ್ಲ ಎಂದ ನ್ಯಾಯಪೀಠ.
– ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಬಾಲಕಿ ಪರ ವಕೀಲರ ನಿರ್ಧಾರ.