ಹೊಸದಿಲ್ಲಿ: ಕೋವಿಡ್-19 ಸೋಂಕು ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೋಂಕು ನಿಯಂತ್ರಿಸುವಲ್ಲಿ ಭಾರತಕ್ಕಿಂತ ಪಾಕಿಸ್ಥಾನವೇ ಉತ್ತಮವಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.
ಲಾಹೋರ್ ಲಿಟ್ ಫೆಸ್ಟಿವಲ್ ನಲ್ಲಿ ಮಾತನಾಡಿದ ಶಶಿ ತರೂರ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವರ್ಚುವಲ್ ಮೀಟ್ ನಲ್ಲಿ ಮಾತನಾಡಿದ ಶಶಿ ತರೂರ್, ಭಾರತ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಜನರಿಗೂ ಈಗ ಅರಿತುವಾಗಿದೆ. ಕೋವಿಡ್-19 ನ್ನು ಗಂಭೀರವಾಗಿ ಪರಿಗಣಿಸಬೇಕು, ಇಲ್ಲದಿದ್ದರೆ ಭಾರತವು ಆರ್ಥಿಕ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಫೆಬ್ರವರಿಯ ಹಿಂದೆಯೇ ಹೇಳಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೋವಿಡ್ ಸೇನಾನಿಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವೆ? ದಿನೇಶ್ ಗುಂಡೂರಾವ್ ಪ್ರಶ್ನೆ
ಅಷ್ಟೇ ಅಲ್ಲದೆ ಮೋದಿ ಸರ್ಕಾರವು ತಬ್ಲೀಘಿ ಜಮಾಅತ್ ಅನ್ನು ದೂಷಿಸುತ್ತಿದೆ ಎಂದು ತರೂರ್ ಆರೋಪಿಸಿದರು.
ಭಾರತದಲ್ಲಿ ಭಾನುವಾರ ಕೋವಿಡ್ ವೈರಸ್ ಪ್ರಕರಣಗಳು 75 ಲಕ್ಷಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 61,871 ಹೊಸ ಸೋಂಕುಗಳು ವರದಿಯಾಗಿವೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದ ಒಟ್ಟು ಕೋವಿಡ್ ವೈರಸ್ ಸಂಖ್ಯೆ 74,94,551 ಏರಿಕೆಯಾಗಿದೆ.