Advertisement

ಭಯೋತ್ಪಾದನೆ ಪಾಕಿಸ್ತಾನದ ಡಿಎನ್ ಎಯಲ್ಲೇ ಇದೆ; ಯುನೆಸ್ಕೋದಲ್ಲಿ ಭಾರತದ ತಿರುಗೇಟು

09:50 AM Nov 16, 2019 | Team Udayavani |

ಪ್ಯಾರೀಸ್: ಪಾಕಿಸ್ತಾನದ ಡಿಎನ್ ಎ(ವಂಶವಾಹಿ)ಯಲ್ಲೇ ಭಯೋತ್ಪಾದನೆ ಆಳವಾಗಿ ಬೇರೂರಿದೆ ಎಂದು ಫ್ರಾನ್ಸ್ ನಲ್ಲಿ ನಡೆದ ಯುನೆಸ್ಕೋ ಸಭೆಯಲ್ಲಿ ಜಮ್ಮು-ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಇದು.

Advertisement

ಭಯೋತ್ಪಾದನೆ ವ್ಯಾಧಿಯ ನಡವಳಿಕೆಯ ಪರಿಣಾಮ ಪಾಕಿಸ್ತಾನ ಉಗ್ರರನ್ನು ಮಟ್ಟಹಾಕುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದಾಗಿ ದೇಶ ಸಂಪೂರ್ಣವಾಗಿ ಕತ್ತಲೆಯಲ್ಲಿದೆ ಎಂದು ಪ್ಯಾರೀಸ್ ನಲ್ಲಿ ನಡೆದ ಯುನೆಸ್ಕೋ ಮಹಾ ಅಧಿವೇಶನದಲ್ಲಿ ಭಾರತ ಪ್ರತಿಪಾದಿಸಿದೆ.

ಪಾಕಿಸ್ತಾನದ ಉಗ್ರವಾದದಿಂದಾಗಿ ಆರ್ಥಿಕ ವ್ಯವಸ್ಥೆ ಕೂಡಾ ದುರ್ಬಲವಾಗಿದೆ. ಸಮಾಜವನ್ನು ತೀವ್ರಗಾಮಿಯತ್ತ ಕೊಂಡೊಯ್ಯುತ್ತಿರುವ ಪಾಕಿಸ್ತಾನದ ಡಿಎನ್ ಎ ಮೂಲದಲ್ಲೇ ಭಯೋತ್ಪಾದನೆ ಅಡಗಿದೆ ಎಂದು ಯುನೆಸ್ಕೋ ಅಧಿವೇಶನದಲ್ಲಿ ಭಾರತದ ನಿಯೋಗದ ಪ್ರತಿನಿಧಿ ಅನನ್ಯ ಆಗರ್ವಾಲ್ ಚಾಟಿ ಬೀಸಿದ್ದಾರೆ.

ತೀವ್ರಗಾಮಿ ಸಿದ್ಧಾಂತ ಮತ್ತು ಭಯೋತ್ಪಾದನೆಯ ರಹಸ್ಯ ಅಭಿವ್ಯಕ್ತಿಯ ಮೂಲಕ ದೇಶ ಕತ್ತಲೆಯಲ್ಲೇ ಉಳಿದಿದೆ ಎಂದು ಹೇಳಿದರು. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಯುನೆಸ್ಕೋ ವೇದಿಕೆಯನ್ನು ರಾಜಕೀಯಗೊಳಿಸಲು ಬಳಸಿಕೊಂಡಿರುವ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next