ನವದೆಹಲಿ: ಮಂಜು ಮುಸುಕಿದ ಕಾರಣದಿಂದ ದಾರಿ ತಪ್ಪಿ ಪಾಕಿಸ್ತಾನಕ್ಕೆ ತೆರಳಿದ್ದ ಬಿಎಸ್‌ಎಫ್ ಯೋಧರೊಬ್ಬರನ್ನು ಪಾಕಿಸ್ತಾನ ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಿಸಿದೆ.
Advertisement
ಪಂಜಾಬ್‌ಗ ಹೊಂದಿಕೊಂಡು ಇರುವ ಅಬೋಹರ್ ಎಂಬಲ್ಲಿ ಈ ಘಟನೆ ನಡೆದಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಪಹರೆ ನಿರತರಾಗಿದ್ದ ವೇಳೆ ಯೋಧರು ಮಂಜಿನ ಕಾರಣದಿಂದಾಗಿ ದಾರಿ ತಪ್ಪಿ ಪಾಕಿಸ್ತಾನಕ್ಕೆ ತೆರಳಿದ್ದರು. ಕೂಡಲೇ ಶೋಧ ಕಾರ್ಯ ನಡೆಸಲಾಯಿತು.
ಪಾಕಿಸ್ತಾನ ರೇಂಜರ್ಸ್‌ನ ಅಧಿಕಾರಿಗಳ ಜತೆಗೆ ಕೂಡ ಚರ್ಚೆ ನಡೆಸಿ ಮಾಹಿತಿ ನೀಡಲಾಗಿತ್ತು. ಅಂತಿಮವಾಗಿ ಗುರುವಾರ ಮಧ್ಯಾಹ್ನ 1.50ರ ವೇಳೆ ಯೋಧರನ್ನು ಭಾರತಕ್ಕೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.