Advertisement

ಮೀಟಿಂಗ್‌ನಲ್ಲಿ ಚಹಾ ಬಿಸ್ಕೆಟ್‌ ಇಲ್ಲ, ಪೇಪರ್‌ ಇಲ್ಲ: ಪಾಪರ್‌ ಪಾಕಿಸ್ಥಾನದ ಅವಸ್ಥೆ!

10:13 AM Aug 27, 2019 | sudhir |

ಇಸ್ಲಾಮಾಬಾದ್‌: ಪಾಕಿಸ್ಥಾನದ ಆರ್ಥಿಕತೆ ಪತನದಂಚಿಗೆ ಬಂದು ನಿಂತಿದ್ದು, ಈಗ ಖರ್ಚನ್ನು ಇನ್ನಷ್ಟು ಕಡಿತಗೊಳಿಸಲು ಉದ್ದೇಶಿಸಿದೆ. ಇದಕ್ಕಾಗಿ ಹೊಸ ಕ್ರಮಗಳನ್ನು ಅದು ಕೈಗೊಂಡಿದ್ದು ಕೂಡಲೇ ಜಾರಿಗೆ ಬರಲಿದೆ. ಇದರಿಂದ ಈ ಆರ್ಥಿಕ ವರ್ಷದಲ್ಲಿ ಖರ್ಚು ಕಡಿಮೆಯಾಗಲಿದೆ ಎನ್ನವುದು ಅದರ ಲೆಕ್ಕಾಚಾರ.

Advertisement

ಅದರಂತೆ ಇನ್ನು ಪಾಕ್‌ ಸರಕಾರದ ಯಾವುದೇ ಅಧಿಕೃತ ಸಭೆಗಳಲ್ಲಿ ಚಹಾ, ತಿಂಡಿ, ಬಿಸ್ಕೆಟ್‌ ಇತ್ಯಾದಿಗಳು ಇರುವುದಿಲ್ಲ. ಕಚೇರಿಗಳಲ್ಲಿ ಪ್ರಿಂಟ್‌ ತೆಗೆಯುವುದಾದರೆ ಇನ್ನು ಪೇಪರ್‌ನ ಎರಡೂ ಬದಿ ಪ್ರಿಂಟ್‌ ತೆಗೆಯಬೇಕು. ಅಲ್ಲದೇ ವಿವಿಧ ಇಲಾಖೆಗಳಿಗೆ ಬರುತ್ತಿದ್ದ ಮೂರ್‍ನಾಲ್ಕು ವೃತ್ತಪತ್ರಿಕೆಗಳು, ನಿಯತಕಾಲಿಕೆಗಳನ್ನು ಒಂದಕ್ಕೆ ಇಳಿಸಲಾಗಿದೆ. ಹೊಸ ಕಾರುಗಳನ್ನು, ಬೈಕ್‌ಗಳನ್ನು ಖರೀದಿ ಮಾಡುವಂತೆ ಇಲ್ಲ. ಅಷ್ಟೇ ಅಲ್ಲದೇ ಉದ್ಯೋಗ ನೇಮಕಾತಿಯನ್ನೂ ಮಾಡುವುದಿಲ್ಲ ಎಂದು ಅದು ಘೋಷಿಸಿದೆ.

ಇದರೊಂದಿಗೆ ಖರ್ಚಿನ ಬಗ್ಗೆ ಅದು ಎಲ್ಲ ಇಲಾಖೆಗಳಿಗೆ ಸೂಚನೆಯನ್ನೂ ನೀಡಿದೆ.

ವಿತ್ತೀಯ ಕೊರತೆ ಕಾಡುತ್ತಿರುವುದರಿಂದ ಸರಕಾರ ನಡೆಸಲು ಹೆಣಗಾಡುವ ಸ್ಥಿತಿ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ತೆಹ್ರೀಕ್‌ ಇ ಇನ್ಸಾಫ್ ಸರಕಾರದ್ದಾಗಿದೆ. ಈ ಬಾರಿಯ ವಿತ್ತೀಯ ಕೊರತೆ ಪಾಕಿಸ್ಥಾನದ ಇತ್ತೀಚಿನ ವರ್ಷಗಳಲ್ಲೇ ಅತಿ ಹೆಚ್ಚು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next