ಇಸ್ಲಾಮಾಬಾದ್: ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಫೈನ್ಯಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್)ನ ಏಷ್ಯಾ-ಪೆಸಿಫಿಕ್ ವಲಯ ಪಾಕಿಸ್ಥಾನದ ಶ್ರೇಯಾಂಕವನ್ನು ಕುಗ್ಗಿಸಿದೆ.
ಉಗ್ರರಿಗೆ ವಿತ್ತೀಯ ನೆರವು ನೀಡುವುದರಲ್ಲಿ ಮತ್ತು ಅಕ್ರಮ ಹಣ ವರ್ಗಾವಣೆ ತಡೆಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಕ್ರಮ ಕೈಗೊಳ್ಳ ಲಾಗಿದೆ.
ಒಟ್ಟು ಹತ್ತು ಅಂಶಗಳ ಪೈಕಿ ಕೇವಲ ಒಂದು ಅಂಶದ ಬಗ್ಗೆ ಮಾತ್ರ ಪಾಕಿಸ್ಥಾನ ಸರಕಾರ ಕ್ರಮ ಕೈಗೊಂಡಿದೆ ಎಂದು ಸಿಡ್ನಿ ಮೂಲದ ಏಷ್ಯಾ- ಪೆಸಿಫಿಕ್ ವಲಯ ಗುಂಪು ಅಭಿಪ್ರಾಯಪಟ್ಟಿದೆ.
ಈ ಗುಂಪಿನ ಸದಸ್ಯರು ಆ.29ರಿಂದ ಸೆ. 2ರ ವರೆಗೆ ಆ ದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
2018ರ ಜೂನ್‌ನಲ್ಲಿ ಎಫ್ಎಟಿಎಫ್ ನೀಡಿದ್ದ 34 ಅಂಶಗಳನ್ನು ಪಾಕಿಸ್ಥಾನ ಪಾಲನೆ ಮಾಡಿದೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ನಡೆಸಿತ್ತು.