ಲಾಹೋರ್: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದಲ್ಲಿ ಜನ ಸಾಮಾನ್ಯರಿಗೆ ದಿನ ಕಳೆದಂತೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಇತ್ತೀಚೆಗೆ ಪೆಟ್ರೋಲ್, ಹಾಲಿನ ಬೆಲೆಗಳನ್ನು ಹೆಚ್ಚಳ ಮಾಡಲಾಗಿದೆ. ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ರಕ್ಷಣಾ ಸಚಿವರಾದ ಖವಾಜಾ ಆಸಿಫ್ ಅವರು ಮಾತನಾಡಿದ್ದಾರೆ.
ಶನಿವಾರ (ಫೆ.18 ರಂದು) ಸಿಯಾಲ್ಕೋಟ್ ನ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನೀವೆಲ್ಲ ಪಾಕಿಸ್ತಾನ ದಿವಾಳಿಯಾಗುತ್ತಿದೆ ಎನ್ನುವುದು ಕೇಳುತ್ತಿರುಬಹುದು. ಆದರೆ ಅದು ಈಗಾಗಲೇ ಆಗಿದೆ. ನಾವು ಈಗ ದಿವಾಳಿಯಾದ ದೇಶದಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೋ-ಪಾರ್ಕಿಂಗ್ ಜಾಗದಲ್ಲಿ ಕಾರು: ಪೇಚಿಗೆ ಸಿಲುಕಿದ ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್
ನಮ್ಮ ದೇಶದಲ್ಲಿನ ಸಮಸ್ಯೆಗೆ ನಮ್ಮಲ್ಲೇ ಪರಿಹಾರವಿದೆ. ದೇಶದ ಸಮಸ್ಯೆಗೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಬಳಿ ಪರಿಹಾರವಿಲ್ಲ. ಕಾನೂನು ಮತ್ತು ಸಂವಿಧಾನವನ್ನು ಅನುಸರಿಸದ ಅಧಿಕಾರಶಾಹಿ, ರಾಜಕಾರಣಿಗಳು ಸೇರಿದಂತೆ ಎಲ್ಲರೂ ದೇಶದ ಈ ಪರಿಸ್ಥಿತಿಗೆ ಕಾರಣವೆಂದು ದೂರಿದರು.
ದೇಶವನ್ನು ಸ್ಥಿರವಾಗಿ ನಿಲ್ಲಿಸಲು ನಮ್ಮ ಕಾಲ ಮೇಲೆ ನಾವು ನಿಲ್ಲುವುದು ಅಗತ್ಯವಾಗಿದೆ ಎಂದು ಹೇಳಿದರು.