Advertisement

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

03:05 PM May 02, 2024 | Team Udayavani |

ನವದೆಹಲಿ: ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ ಇದೀಗ ಬಿಜೆಪಿಗೆ ಕಾಂಗ್ರೆಸ್‌ ವಿರುದ್ಧ ಹೊಸ ಅಸ್ತ್ರವೊಂದು ನೀಡಿದಂತಾಗಿದೆ.

Advertisement

ಇದನ್ನೂ ಓದಿ:Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು

ಪಾಕಿಸ್ತಾನದ ಮಾಜಿ ಸಚಿವ ಫವಾದ್‌ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ರಾಹುಲ್‌ ಗಾಂಧಿ ವಿಡಿಯೋವನ್ನು ಟ್ವೀಟ್‌ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಕಾಂಗ್ರೆಸ್‌ ಯುವರಾಜನನ್ನು ಭಾರತದ ಪ್ರಧಾನಿಯನ್ನಾಗಿ ಮಾಡಲು ಪಾಕಿಸ್ತಾನ ತುಂಬಾ ಉತ್ಸುಕವಾಗಿದೆ ಎಂದು ಹೇಳಿದರು.

“ಕಾಕತಾಳೀಯ ಎಂಬಂತೆ ಭಾರತದಲ್ಲಿ ಕಾಂಗ್ರೆಸ್‌ ದುರ್ಬಲವಾಗುತ್ತಿದೆ. ತಮಾಷೆಯ ಸಂಗತಿ ಏನೆಂದರೆ ಕಾಂಗ್ರೆಸ್‌ ಇಲ್ಲಿ ಸಾಯುತ್ತಿದ್ದರೆ, ಪಾಕಿಸ್ತಾನ ಅಲ್ಲಿ ಗೋಳಿಡುತ್ತಿದೆ. ಈಗ ಪಾಕ್‌ ಮುಖಂಡರು ಕಾಂಗ್ರೆಸ್‌ ಪಕ್ಷಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಯುವರಾಜನನ್ನು ಭಾರತದ ಪ್ರಧಾನಿ ಮಾಡಲು ಉತ್ಸುಕವಾಗಿದೆ. ಕಾಂಗ್ರೆಸ್‌ ಯಾವಾಗಲೂ ಪಾಕಿಸ್ತಾನದ ಅಭಿಮಾನಿಯಾಗಿದೆ. ಹೀಗೆ ಪಾಕ್‌ ಮತ್ತು ಕಾಂಗ್ರೆಸ್‌ ನಡುವಿನ ಸಹಭಾಗಿತ್ವ ಈಗ ಸಂಪೂರ್ಣವಾಗಿ ಬೆತ್ತಲಾಗಿದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next