Advertisement

ಶ್ರೀನಗರ-ಶಾರ್ಜಾ ವಿಮಾನ ಹಾರಾಟಕ್ಕೆ ತಗಾದೆ ತೆಗೆದ ಪಾಕ್‌

09:42 PM Nov 03, 2021 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ಅರಬ್‌ ಸಂಯುಕ್ತ ಸಂಸ್ಥಾನದ ಶಾರ್ಜಾಗೆ ಇತ್ತೀಚೆಗಷ್ಟೇ ಹಾರಾಟ ಆರಂಭಿಸಿದ್ದ ಗೋ ಫ‌ಸ್ಟ್‌ ವಿಮಾನ ಸಂಸ್ಥೆಯ ವಿಮಾನಗಳಿಗೆ ತನ್ನ ವಾಯುಪ್ರದೇಶದಲ್ಲಿ ಹಾರಾಟ ನಡೆಸುವುದಕ್ಕೆ ಪಾಕಿಸ್ತಾನ ಅನುಮತಿ ನಿರಾಕರಿಸಿದೆ.

Advertisement

ಶ್ರೀನಗರದಿಂದ ಹೊರಡುತ್ತಿರುವ ವಿಮಾನಗಳು ಪಾಕಿಸ್ತಾನದ ಏರೋಸ್ಪೇಸ್‌ ಮಾರ್ಗವಾಗಿ ಶಾರ್ಜಾಗೆ ತೆರಳುತ್ತಿವೆ. ಅಕ್ಟೋಬರ್‌ನಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರು ಈ ವಿಮಾನಗಳ ಹಾರಾಟಕ್ಕೆ ಚಾಲನೆ ನೀಡಿದ್ದರು. ಆದರೆ ಇದೀಗ ತಮ್ಮ ವಾಯುಪ್ರದೇಶದಲ್ಲಿ  ವಿಮಾನಗಳ ಹಾರಾಟ ನಡೆಸದಂತೆ ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಪಾಕ್‌ ಹೇಳಿದೆ.

ಇದನ್ನೂ ಓದಿ:ಕ್ಲಬ್‌ಹೌಸ್‌: ಕನ್ನಡ ಸೇರಿದಂತೆ 13 ಸ್ಥಳೀಯ ಭಾಷೆಗಳಿಗೆ ಆದ್ಯತೆ

ಪಾಕಿಸ್ತಾನದ ಬದಲು ಬೇರೆ ಮಾರ್ಗದಲ್ಲಿ ಶಾರ್ಜಾಗೆ ಹೋಗುವುದರಿಂದ ಒಂದು ಗಂಟೆ ಹೆಚ್ಚುವರಿ ಸಮಯ ಬೇಕಾಗಲಿದ್ದು, ಟಿಕೆಟ್‌ ದರವೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿಂದೆ 2009ರಲ್ಲಿ ಶ್ರೀನಗರ-ದುಬೈ ಮಾರ್ಗದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಕ್ಕೂ ಪಾಕ್‌ ಇದೇ ರೀತಿ ತಗಾದೆ ತೆಗೆದಿದ್ದು, ಆ ಮಾರ್ಗವನ್ನೇ ಸ್ಥಗಿತಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next