ಹೊಸದಿಲ್ಲಿ: ಪರಿಹಾರ ಕಾರ್ಯಾಚರಣೆಗಾಗಿ ಟರ್ಕಿಗೆ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ವಿಮಾನಕ್ಕೆ ಪಾಕಿಸ್ತಾನ ತನ್ನ ವಾಯುಪ್ರದೇಶದ ಪ್ರವೇಶವನ್ನು ನಿರಾಕರಿಸಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪನವಾಗಿದ್ದು, ಭಾರತವು ಸಹಾಯಹಸ್ತ ಚಾಚಿದೆ. ಪರಿಹಾರ ಕಾರ್ಯಾಚರಣೆಯಲ್ಲಿ ಟರ್ಕಿಗೆ ಸಹಾಯ ಮಾಡಲು, ಎನ್ ಡಿಆರ್ ಎಫ್ (ಭಾರತೀಯ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ) ತಂಡಗಳೊಂದಿಗೆ ವೈದ್ಯಕೀಯ ಸಹಾಯ ಕಳುಹಿಸುತ್ತಿದೆ.
ಇದಕ್ಕಾಗಿ ಭಾರತವು ತನ್ನ ಅತಿದೊಡ್ಡ ಸರಕು ವಿಮಾನ ಬೋಯಿಂಗ್ ನಿರ್ಮಿತ C-17 ಗ್ಲೋಬ್‌ಮಾಸ್ಟರನ್ನು ಸೇವೆಗಾಗಿ ನಿಯೋಜಿಸಿದೆ. ಮೊದಲ ವಿಮಾನ ಆಧುನಿಕ ಡ್ರಿಲ್ಲಿಂಗ್ ಉಪಕರಣಗಳು, ವೈದ್ಯರು ಮತ್ತು ತರಬೇತಿ ಹೊಂದಿನ ನಾಯಿಗಳೊಂದಿಗೆ ಅದಾನ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಇದನ್ನೂ ಓದಿ:ಕೊರಟಗೆರೆ ತಾಲೂಕಿನಲ್ಲಿ ದಾಖಲೆ ಬೆಲೆಗೆ ಮಾರಾಟವಾದ ವೀಳ್ಯದೆಲೆ
Related Articles
ಸಿಎನ್ಎನ್ ನ್ಯೂಸ್-18 ವರದಿಯ ಪ್ರಕಾರ, ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನಿರಾಕರಿಸಿದ ಕಾರಣ ಭಾರತೀಯ ವಾಯುಪಡೆ ವಿಮಾನವು ಬೇರೆ ಮಾರ್ಗವನ್ನು ತೆಗೆದುಕೊಳ್ಳಬೇಕಾಯಿತು.
ಟರ್ಕಿಯಲ್ಲಿ ಎರಡು ದಿನಗಳಲ್ಲಿ ಐದು ಭೂಕಂಪನಗಳು ಸಂಭವಿಸಿದ್ದು, ಇದರ ಪರಿಣಾಮವಾಗಿ 4,800 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಹತ್ತಾರು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ಶಿಥಿಲಗೊಂಡ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ.