Advertisement

ಚೆಂಡು ಬಡಿದು ಪಾಕ್‌ ಕ್ರಿಕೆಟಿಗ ಸಾವು

11:35 AM Aug 17, 2017 | Team Udayavani |

ಕರಾಚಿ: ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲಿಪ್‌ ಹ್ಯೂಸ್‌ ಮೈದಾನದಲ್ಲಿ ತಲೆಗೆ ಚೆಂಡು ಬಡಿದು ಸಾವಿಗೀಡಾಗಿ ಮೂರು ವರ್ಷಗಳಾಗಿದೆ. ಈ ನೋವು ವಿಶ್ವ ಕ್ರಿಕೆಟ್‌ನಿಂದ ಇನ್ನೂ ದೂರವಾಗಿಲ್ಲ. ಈ ಬೆನ್ನಲ್ಲೇ ಇಂತಹುದೇ ಒಂದು ಮೈದಾನ ಅವಘಡವೊಂದಕ್ಕೆ ಜೀವ ಬಲಿಯಾಗಿದೆ. ಪಾಕಿಸ್ತಾನದ
ಕ್ಲಬ್‌ ಕ್ರಿಕೆಟಿಗ ಜುಬೇರ್‌ ಅಹ್ಮದ್‌ ಸಾವಿಗೀಡಾದವರು. ಈ ಸುದ್ದಿಯನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಟ್ವೀಟರ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

Advertisement

ಏನಿದು ಘಟನೆ?: ಸೋಮವಾರ ಮರ್ದಾನ ಜಿಲ್ಲೆಯ ಖೈಬರ್‌ ಪ್ರಾಂತ್ಯದಲ್ಲಿ ಕ್ಲಬ್‌ ಕ್ರಿಕೆಟ್‌ ನಡೆಯುತ್ತಿತ್ತು. ಈ ವೇಳೆ ಪಂದ್ಯದಲ್ಲಿ ಜುಬೇರ್‌ ಹೆಲ್ಮೆಟ್‌
ಧರಿಸದೆ ಬ್ಯಾಟಿಂಗ್‌ ನಡೆಸುತ್ತಿದ್ದಾಗ ತಲೆಗೆ ಚೆಂಡು ಬಡಿದಿದೆ.

ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ವೇಳೆಗಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಘಟನೆ ಕುರಿತಂತೆ ಪಿಸಿಬಿ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ ಪಾಕ್‌ ಆಟಗಾರರು ಕಡ್ಡಾಯವಾಗಿ ಹೆಲ್ಮೆಟ್‌ ಬಳಸಲೇಬೇಕು ಎಂದು ಸೂಚಿಸಿದೆ.

ಫಿಲ್‌ ಹ್ಯೂಸ್‌ ಸಾವಿನ ನೆನಪು 
2014ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲಿಪ್‌ ಹ್ಯೂಸ್‌ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೈದಾನ ಅವಘಡದಲ್ಲಿ ದುರಂತ ಸಾವಿಗೀಡಾಗಿದ್ದರು. ನ್ಯೂ  ಸೌತ್‌ ವೇಲ್ಸ್‌ ವೇಗಿ ಸೀನ್‌ ಅಬೋಟ್‌ ಎಸೆತದಲ್ಲಿ ಸೌತ್‌ ಆಸ್ಟ್ರೇಲಿಯಾದ ಹ್ಯೂಸ್‌ ತಲೆಗೆ ಚೆಂಡು ತಾಗಿತ್ತು. ಜೀವನ್ಮರಣದ ಸ್ಥಿತಿಯಲ್ಲಿದ್ದ ಹ್ಯೂಸ್‌
ಬಳಿಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next