Advertisement

ಮಹೇಂದ್ರ ಸಿಂಗ್ ಧೋನಿಯಂತಹ ನಾಯಕ ನಮ್ಮಲ್ಲೂ ಇರಬೇಕಿತ್ತು: ಪಾಕ್ ಆಟಗಾರ

03:23 PM Aug 20, 2020 | keerthan |

ಇಸ್ಲಾಮಾಬಾದ್: ಕ್ರಿಕೆಟ್ ವಿಶ್ವದಲ್ಲಿ ಈಗ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರದ್ದೇ ಮಾತುಗಳು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ರಾಜೀನಾಮೆ ನೀಡುತ್ತಿದ್ದಂತೆ ಕೂಲ್ ಕ್ಯಾಪ್ಟನ್ ನ ಗುಣಗಾನ ಆರಂಭವಾಗಿದೆ. ಇದೀಗ ಪಾಕ್ ಆಟಗಾರನೋರ್ವ ಈ ಬಗ್ಗೆ ಮಾತನಾಡಿದ್ದು, ಪಾಕಿಸ್ಥಾನ ತಂಡದಲ್ಲೂ ಧೋನಿಯಂತಹ ನಾಯಕನೋರ್ವ ಇರಬೇಕಿತ್ತು ಎಂದು ಹೇಳಿಕೊಂಡಿದ್ದಾರೆ.

Advertisement

ಪಾಕ್ ನ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಇದೀಗ ಧೋನಿ ಬಗ್ಗೆ ಮಾತನಾಡಿದ್ದಾರೆ. ಧೋನಿ ತಂಡವನ್ನು ತನ್ನ ಜೊತೆಗೆ ಮುನ್ನಡೆಸುತ್ತಿದ್ದರು. ಇದು ಅವರ ವಿಶೇಷತೆಯಾಗಿತ್ತು ಎಂದು ಕಮ್ರಾನ್ ಅಕ್ಮಲ್ ಹೇಳಿಕೊಂಡಿದ್ದಾರೆ.

ತಂಡದ ನಾಯಕತ್ವ ಮಾಡುವುದು ಸುಲಭ. ತಂಡ ಗೆಲ್ಲಲಿ ಸೋಲಲಿ, ನಾಯಕನ ಸ್ಥಾನ  ತಂಡದಲ್ಲಿ ಭದ್ರವಾಗಿರುತ್ತದೆ. ಅದರೆ ಧೋನಿ ತಂಡವನ್ನು ಗೆಲುವಿನಡೆಗೆ ಕೊಂಡೊಯ್ಯುತ್ತಿದ್ದರು. ಆಷ್ಟೇ ಅಲ್ಲದೆ ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದರು ಎಂದು ಕಮ್ರಾನ್ ಹೇಳಿದ್ದಾರೆ.

ಧೋನಿ ನಾಯಕನಾಗಿ ಓರ್ವ ಉತ್ತಮ ಉದಾಹರಣೆ. ಪಾಕಿಸ್ಥಾನ ತಂಡಕ್ಕೂ ಭವಿಷ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಯಂತಹ ನಾಯಕನ ಅಗತ್ಯವಿದೆ ಎಂದು ಹೇಳಿದ್ದಾರೆ. ಇದಲ್ಲದೆ ಧೋನಿಗೆ ವಿದಾಯ ಪಂದ್ಯವನ್ನು ಆಯೋಜಿಸಿ ಗೌರವ ಸಲ್ಲಿಸಬೇಕು ಎಂದು ಕಮ್ರಾನ್ ಅಭಿಪ್ರಾಯ ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next