Advertisement

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

10:31 PM Apr 23, 2024 | Team Udayavani |

ರಾವಲ್ಪಿಂಡಿ: ಪಾಕಿಸ್ತಾನ ಕ್ರಿಕೆಟ್‌ ತಂಡ ಇತ್ತೀಚೆಗೆ 2 ವಾರಗಳ ಕಠಿಣ ಸೇನಾ ತರಬೇತಿಯಲ್ಲಿ ಪಾಲ್ಗೊಂಡಾಗ, ಇಡೀ ತಂಡದ ಛಾತಿಯೇ ಬದಲಾಗಲಿದೆ ಎಂದು ನಂಬಲಾಗಿತ್ತು. ಆದರೆ ತಂಡದ ಶಿಸ್ತು, ಪ್ರದರ್ಶನದ ಮೇಲೆ ಸೇನಾ ತರಬೇತಿ ಅಂಥದ್ದೇನೂ ಪರಿಣಾಮ ಬೀರಿದಂತಿಲ್ಲ ಎಂಬ ಹಾಸ್ಯಗಳು ಶುರುವಾಗಿವೆ.

Advertisement

ಇದಕ್ಕೆ ಸಾಕ್ಷಿಯೆಂಬಂತೆ ನ್ಯೂಜಿಲೆಂಡ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಮಾರ್ಕ್‌ ಚಾಪ್ಮನ್‌ ಕ್ಯಾಚನ್ನು ಪಾಕ್‌ ಕ್ರಿಕೆಟರ್ಸ್‌ 3 ಬಾರಿ ಕೈಚೆಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ.

3 ಬಾರಿ ಜೀವದಾನ ಪಡೆದ ಚಾಪ್ಮನ್‌ ಅಜೇಯ 87 ರನ್‌ ಸಿಡಿಸಿ ನ್ಯೂಜಿಲೆಂಡ್‌ ಗೆಲುವಿಗೆ ಕಾರಣರಾದರು! ಈ ವಿಡಿಯೋ ಈಗ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next