Advertisement

ಅತ್ಯಾಚಾರಿಗಳಿಗೆ “ನಪುಂಸಕತ್ವ’ಶಿಕ್ಷೆ 

11:56 PM Nov 18, 2021 | Team Udayavani |

ಇಸ್ಲಾಮಾಬಾದ್: ಒಂದಕ್ಕಿಂತ ಹೆಚ್ಚು ಬಾರಿ ಅತ್ಯಾಚಾರಗಳನ್ನೆಸಗಿರುವ ಅಪರಾಧಿಗಳನ್ನು ಔಷಧಗಳ ಮೂಲಕ ಶಾಶ್ವತವಾಗಿ ನಪುಂಸಕರನ್ನಾಗಿಸುವ ಶಿಕ್ಷೆ ಜಾರಿಗೊಳಿಸುವ ಮಸೂದೆಗೆ ಪಾಕಿಸ್ಥಾನ ಸಂಸತ್ತು ಒಪ್ಪಿಗೆ ನೀಡಿದೆ.

Advertisement

ಇತ್ತೀಚೆಗೆ, ಪಾಕಿಸ್ಥಾನದಲ್ಲಿ ಮಹಿಳೆಯರ ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದವು. ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವಂಥ ಕಠಿನ ಕಾನೂನು ಜಾರಿಯಾಗಬೇಕು ಎಂದು ಸಮಾಜದ ನಾನಾ ಸ್ತರಗಳಿಂದ ಒಕ್ಕೊರಲಿನ ಆಗ್ರಹವೂ ಮೂಡಿಬಂದಿತ್ತು.

ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ಸರಕಾರ ಈ ಮಸೂದೆಯನ್ನು ಸಿದ್ಧಪಡಿಸಿತ್ತು.  ವರ್ಷದ ಹಿಂದೆಯೇ ಈ ಶಿಕ್ಷೆಯನ್ನು ಪಾಕಿಸ್ಥಾನ ಸರಕಾರ ಅಧ್ಯಾದೇಶ ಹೊರಡಿಸುವ ಜಾರಿಗೆ ತಂದಿತ್ತು. ಈಗ ಅದನ್ನು ಮಸೂದೆ ರೂಪದಲ್ಲಿ ಮಂಡಿಸಿ ಕಾನೂನಾಗಿ ಜಾರಿಗೆ ತಂದಿದೆ.

ಈ ಶಿಕ್ಷೆಯನ್ನು ಸರಕಾರ ರಚಿಸುವ ಪ್ರತ್ಯೇಕ ವೈದ್ಯಕೀಯ ಮಂಡಳಿಯಲ್ಲಿರುವ ತಜ್ಞರ ವತಿಯಿಂದ ಜಾರಿಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next