ಇಸ್ಲಾಮಾಬಾದ್: ಇನ್ನು ಮುಂದೆ ಪಾಕಿಸ್ತಾನದ ವಾಹಿನಿಗಳಲ್ಲಿ ಅಪ್ಪಿಕೊಳ್ಳುವುದು, ಮುದ್ದಾಡುವುದು, ಬೋಲ್ಡ್ ಬಟ್ಟೆ ಧರಿಸಿರುವಂತಹ ವಿಡಿಯೋಗಳನ್ನು ಪ್ರಸಾರ ಮಾಡದಿರುವಂತೆ ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಮಂಡಳಿ (ಪಿಇಎಂಆರ್‌ಎ) ಆದೇಶ ಹೊರಡಿಸಿದೆ.
ವಾಹಿನಿಗಳು ಅಸಭ್ಯ ಬಟ್ಟೆ ಧರಿಸಿರುವ, ಮುದ್ದಾಡುವ, ಹಾಸಿಗೆಯಲ್ಲಿನ ದೃಶ್ಯ ಸೇರಿ ಅನೇಕ ವಿವಾದಾತ್ಮಕ ವಿಡಿಯೋಗಳನ್ನು ಪ್ರಸಾರ ಮಾಡುತ್ತಿವೆ. ಗಂಡ ಹೆಂಡತಿ ಸಂಬಂಧವನ್ನು ಮೋಹಕವಾಗಿ ತೋರಿಸಿ, ಇಸ್ಲಾಮಿಕ್ ಬೋಧನೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷವನ್ನು ಚರಿತ್ರೆ ಕ್ಷಮಿಸದು: ಸುಧಾಕರ
ಸರ್ಕಾರದ ಈ ನಿಲುವಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. “ಹೌದು. ಗಂಡ-ಹೆಂಡತಿ ಮಧ್ಯೆ ಮೋಹಕತೆ ತೋರಿಸಬಾರದು.
ಏಕೆಂದರೆ ನಿಂದನೆ, ನಿಯಂತ್ರಣ, ಹಿಂಸೆಯೇ ನಮ್ಮ ಸಂಸ್ಕೃತಿ’ ಎಂದು ಮಾನವ ಹಕ್ಕು ಹೋರಾಟಗಾರ್ತಿ ರೀಮಾ ಓಮರ್ ಆಕ್ರೋಶ ಹೊರಹಾಕಿದ್ದಾರೆ.