ಕಾಬೂಲ್: ಅಫ್ಘಾನಿಸ್ಥಾನದ ಖೂಸ್ಟ್ ಪ್ರಾಂತ್ಯದಲ್ಲಿ ಪಾಕಿಸ್ಥಾನವು ಏರ್ ಸ್ಟ್ರೈಕ್ ನಡೆಸಿದೆ ಎಂದು ಅಫ್ಘಾನಿಸ್ಥಾನದ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರ ರಾತ್ರಿ ಪಾಕಿಸ್ಥಾನ ವೈಮಾನಿಕ ದಾಳಿ ನಡೆಸಿದ್ದು, ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ.
ಪಾಕಿಸ್ತಾನಿ ವಿಮಾನಗಳು ಖೋಸ್ಟ್ ಪ್ರಾಂತ್ಯದ ಸ್ಪೌರಾ ಜಿಲ್ಲೆಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದವು ಎಂದು ವರದಿ ತಿಳಿಸಿದೆ.
ಸ್ಪೌರಾ ಜಿಲ್ಲೆಯ ಮಿರ್ಪಾರ್, ಮಂಡೇಹ್, ಶೈದಿ ಮತ್ತು ಕೈ ಗ್ರಾಮಗಳ ಮೇಲೆ ಕನಿಷ್ಠ 26 ಪಾಕಿಸ್ಥಾನಿ ವಿಮಾನಗಳು ದಾಳಿ ನಡೆಸಿದೆ. ಖೋಸ್ಟ್ ಪ್ರಾಂತ್ಯದ ತಾಲಿಬಾನ್ ಪೊಲೀಸ್ ಮುಖ್ಯಸ್ಥ ಮುಸ್ತಘಫರ್ ಗರ್ಬ್ಜ್ ಈ ಬಗ್ಗೆ ಸೋಭ್ ಪತ್ರಿಕೆಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅಪಘಾತ ; ಗಾಯಾಳುಗಳನ್ನು ಸಾಗಿಸಲು ಕಾರು ಬಿಟ್ಟು ಬೈಕಿನಲ್ಲಿ ತೆರಳಿದ ಸಚಿವೆ ಶೋಭಾ ಕರಂದ್ಲಾಜೆ
ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಜನರು ಸಾವನ್ನಪ್ಪಿದ್ದಾರೆ ಎಂದು ವಜಿರಿಸ್ತಾನ್ ಪ್ರದೇಶದ ಕಿಂಗ್ ಜಮ್ಶಿದ್ ಪತ್ರಿಕೆಗೆ ತಿಳಿಸಿದ್ದಾರೆ. ಆದಾಗ್ಯೂ, ಬಾಂಬ್ ದಾಳಿಯಲ್ಲಿನ ಸಾವುನೋವುಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಗರ್ಬ್ಜ್ ಹೇಳಿದರು.
ಮತ್ತೊಂದೆಡೆ, ಶುಕ್ರವಾರ 9 ಗಂಟೆಯ ಸುಮಾರಿಗೆ, ಪಾಕಿಸ್ತಾನಿ ಪಡೆಗಳು ಗೋರ್ಬ್ಜ್ ಜಿಲ್ಲೆಯ ಮಾಸ್ಟರ್ಬೆಲ್ ಪ್ರದೇಶದಲ್ಲಿ ತಾಲಿಬಾನ್ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದವು.