ದುಬೈ: ಐಸಿಸಿ ಟಿ20 ವಿಶ್ವಕಪ್ ಕೂಟದ ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ನಡುವಿನ ಪಂದ್ಯದ ವೇಳೆ ಹೊಡೆದಾಟ ನಡೆದಿದೆ. ಅತ್ತ ಮೈದಾನದಲ್ಲಿ ಆಟಗಾರರು ಸ್ಪರ್ಧೆ ಮಾಡುತ್ತಿದ್ದರೆ, ಇತ್ತ ಸ್ಟೇಡಿಯಂ ಹೊರಗಡೆ ಉಭಯ ತಂಡಗಳ ಅಭಿಮಾನಿಗಳು ಹೊಡೆದಾಟಕ್ಕೆ ಇಳಿದಿದ್ದರು.
ಕ್ರೀಡಾಂಗಣದ ಹೊರಗೆ ಸಾವಿರಾರು ಮಂದಿ ಸೇರಿದ್ದರು. ಅನೇಕರು ತಾವು ಪಂದ್ಯದ ಟಿಕೆಟ್ ಕೊಂಡಿದ್ದರೂ ನಮ್ಮನ್ನು ಒಳಗೆ ಬಿಡುತ್ತಿಲ್ಲ ಎಂದು ಕೂಗಾಡಿದರು. ಈ ಮಧ್ಯೆ ಕೆಲವರಂತೂ ಬ್ಯಾರಿಕೇಡ್ ಗಳನ್ನು ತಳ್ಳಿ ಒಳ ನುಗ್ಗಲು ಯತ್ನಿಸಿದರು.
ಇದನ್ನೂ ಓದಿ:ಆ್ಯಶಸ್ ಎದುರಾಳಿಗಳ ನಡುವೆ ಟಿ20 ಕದನ
ಪಂದ್ಯಕ್ಕೆ ಸುಮಾರು 16 ಸಾವಿರ ಟಿಕೆಟ್ ಬಿಕರಿಯಾಗಿತ್ತು. ಆದರೆ ಸಾವಿರಾರು ಟಿಕೆಟ್ ರಹಿತ ಜನರು ಮೈದಾನದತ್ತ ಆಗಮಿಸಿದರು. ಕ್ರೀಡಾಂಗಣಕ್ಕೆ ನುಗ್ಗಲು ಯತ್ನಿಸಿದರು ಎಂದು ಐಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.
ದುಬೈ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಿದರು. ಕ್ರೀಡಾಂಗಣದ ಒಳಗಿದ್ದ ಪ್ರೇಕ್ಷಕರು ಭದ್ರತೆ ಕಾಪಾಡಿದರು ಎಂದು ಐಸಿಸಿ ತಿಳಿಸಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ಐಸಿಸಿ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಗೆ ಸೂಚನೆ ನೀಡಿದೆ.