ಕಾಬೂಲ್/ಇಸ್ಲಾಮಾಬಾದ್: ಅಫ್ಘಾನಿಸ್ಥಾನ ವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬಳಿಕ ಮೊದಲು ಸಂತಸ ವ್ಯಕ್ತಪಡಿಸಿದ್ದು ಪಾಕಿ ಸ್ಥಾನ. ಮೊದಲಿನಿಂದಲೂ ಕೂಡ ಉಗ್ರ ಸಂಘಟ ನೆಯ ಜತೆಗೆ ಸ್ನೇಹ ಹಸ್ತ ಚಾಚುತ್ತಾ ಬಂದಿದೆ. ಆ ಗಾಢ ಮಿತ್ರರ ನಡುವೆ ಗುಂಡಿನ ಹಾರಾಟ ನಡೆದಿದೆ. ಪಾಕಿಸ್ಥಾನದ ಖೈಬರ್ ಪಖ್ತಂಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಬೇಲಿ ಹಾಕುವ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ತಾಲಿಬಾನ್ ಉಗ್ರರು ಮತ್ತು ಪಾಕ್ ಯೋಧರ ನಡುವೆ ಅರ್ಧ ಗಂಟೆ ಕಾಲ ಗುಂಡಿನ ಚಕಮಕಿ ನಡೆದಿದೆ. ಗಂಜ್ಗಾ, ಸಾರ್ಕನೋ ಮತ್ತು ಕುನಾರ್ ಎಂಬಲ್ಲಿ ಈ ಘಟನೆ ನಡೆದಿದೆ. ಆದರೆ ತಾಲಿಬಾನ್ ಮತ್ತು ಪಾಕಿಸ್ಥಾನ ಮಾತ್ರ ಬಾಯಿಬಿಟ್ಟಿಲ್ಲ ಎನ್ನುವುದು ಗಮನಾರ್ಹ. ಆದರೆ ಸ್ಥಳೀಯ ಮಾಧ್ಯಮಗಳಲ್ಲಿ ಘಟನೆಯ ಫೋಟೋ ಸಹಿತ ವರದಿಯಾಗಿವೆ. ಜತೆಗೆ ವೀಡಿಯೋಗಳೂ ಕೂಡ ಹರಿದಾಡುತ್ತಿವೆ.
ಸರಿಯಾಯಿತು ಎಂದಿದ್ದರು: ಗಡಿ ವಿಚಾರದಲ್ಲಿ ಉಭಯ ರಾಷ್ಟ್ರಗಳ ನಡುವೆ ಸಾಕಷ್ಟು ಗೊಂದಲ ಗಳು ಇವೆ. ಕೆಲವು ದಿನಗಳ ಹಿಂದೆಯೇ ಅದರ ಬಗ್ಗೆ ಸಭೆ ನಡೆಸಿ ಬಿಕ್ಕಟ್ಟು ಪರಿಹಾರ ಮಾಡಿ ಕೊಂಡಿದ್ದೇವೆ ಎಂದು ಎರಡೂ ರಾಷ್ಟ್ರಗಳು ಹೇಳಿ ಕೊಂಡಿದ್ದವು. ತೆಹ್ರೀಕ್-ಎ-ತಾಲಿಬಾನ್ ಉಗ್ರ ಸಂಘಟನೆ ಪಾಕಿ ಸ್ಥಾನದೊಂದಿಗೆ ಮಾಡಿಕೊಂಡಿದ್ದ ಕದನ ವಿರಾಮವನ್ನು ಮುರಿಯುವುದಾಗಿಯೂ ಹೇಳಿತ್ತು. ಅದರ ಬೆನ್ನಲ್ಲೇ ಈ ಕಾಳಗ ನಡೆದಿದೆ.
ಅಫ್ಘಾನಿಸ್ಥಾನ ಜತೆಗೂ ಗಡಿ ತಗಾದೆ: ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಭಾರತದ ಜತೆಗೆ ಕಾಲುಕೆರೆದು ಪಾಕಿಸ್ಥಾನ ಜಗಳಕ್ಕೆ ಬರುತ್ತದೆ. ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ನಡುವೆ 2,600 ಕಿಮೀ ದೂರದ ಅಂತಾರಾಷ್ಟ್ರೀಯ ಗಡಿ ಇದೆ. ಎರಡೂ ರಾಷ್ಟ್ರಗಳ ಮಧ್ಯೆ ಇರುವ ದುರಂದ್ ರೇಖೆಯನ್ನೇ ಅಂತಾರಾಷ್ಟ್ರೀಯ ಗಡಿಯೆಂದು ಹೇಳಲಾಗುತ್ತದೆ. ಅಫ್ಘಾನ್‌ನಿಂದ ಉಗ್ರರ ಒಳನು ಸುಳುವಿಕೆ ತಪ್ಪಿಸುವ ನಿಟ್ಟಿನಲ್ಲಿ ಪಾಕಿಸ್ಥಾನ 2017ರಿಂದ ತನ್ನ ಗಡಿಗೆ ಬೇಲಿ ಹಾಕಿಕೊಳ್ಳ ಲಾರಂಭಿಸಿದೆ. ಅದರಲ್ಲಿ ಶೇ. 90ರಷ್ಟು ಕೆಲಸ ಈಗಾಗಲೇ ಮುಗಿದಿದೆ.
ಬೇಲಿ ಹಾಕುವ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿ ರುವ ತಾಲಿಬಾನಿಯರು, ಬುಧವಾರ ನಂಗರ ಹಾರ್‌ನ ಪೂರ್ವ ಪ್ರಾಂತ್ಯದಲ್ಲಿರುವ ಗುಷ್ಟಾ ಜಿಲ್ಲೆಯಲ್ಲಿ ಪಾಕ್‌ನ ಬೇಲಿಯನ್ನು ಹಾಳುಗೆಡವಿ ದ್ದಾರೆ. ಅಲ್ಲಿದ್ದ ತಂತಿಯನ್ನೆಲ್ಲ ತುಂಡರಿಸಿದ್ದಾರೆ. ಬೇಲಿ ಕೆಲಸಕ್ಕೆ ಅಡ್ಡ ಪಡಿಸಿದ್ದಲ್ಲದೆ, ಬೇಲಿಗೆಂದು ಇಟ್ಟಿದ್ದ ತಂತಿಯನ್ನೇ ಎತ್ತುಕೊಂಡು ಹೋಗಿದ್ದ ರೆಂದು ಡಾನ್ ಪತ್ರಿಕೆ ವರದಿ ಮಾಡಿತ್ತು.