Advertisement

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

09:00 PM Nov 26, 2024 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಮಂಗಳವಾರದ ವೇಳೆಗೆ ಘಟನೆಯಲ್ಲಿ 6 ಮಂದಿ ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ. ಪರಿಸ್ಥಿತಿ ಕೈ ಮೀರಿರುವ ಹಿನ್ನೆಲೆಯಲ್ಲಿ ಪಾಕ್‌ ಸೇನೆ ಮಧ್ಯ ಪ್ರವೇಶಿಸಿದ್ದು,  ಪ್ರತಿಭಟನಾಕಾರರ ಹತ್ತಿಕ್ಕಲು ಕಂಡಲ್ಲಿ ಗುಂಡು ಆದೇಶ ಹೊರಡಿಸಿದೆ.

Advertisement

ಕಳೆದ ವರ್ಷ ನಡೆದಿದ್ದ ಚುನಾವಣೆಯಲ್ಲಿ ಅಕ್ರಮ ನಡೆದಿದೆ,  ಪಾಕಿಸ್ತಾನ್‌ -ತಹ್ರೀಕ್‌-ಇ-ಇನ್ಸಾಫ್ (ಪಿಟಿಐ) ಕಾರ್ಯಕರ್ತರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಲು  ಕಾರ್ಯಕರ್ತರಿಗೆ ಇಮ್ರಾನ್‌ ಕರೆ ನೀಡಿದ್ದರು.

ರಸ್ತೆಗಳಲ್ಲಿ ಅಡ್ಡಲಾಗಿ ಇಟ್ಟಿರುವ ಕಂಟೈನರ್‌ಗಳನ್ನು ಹತ್ತಿ  ಕಲ್ಲು ತೂರಾಟ ನಡೆಸಿದ್ದಾರೆ. ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ, ಸರ್ಕಾರಿ ಸಂಸ್ಥೆಗಳಿರುವ ಡಿ-ಚೌಕ್‌ಗೆ ಮುತ್ತಿಗೆ ತಡೆಯಲು ಸೇನೆ ಮಧ್ಯ ಪ್ರವೇಶಿಸಿದೆ. ಸ್ಥಳೀಯಾಡಳಿತವು ಇಸ್ಲಾಮಾಬಾದ್‌, ರಾವಲ್‌ಪಿಂಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಅಂತರ್ಜಾಲ ಸ್ಥಗಿತಗೊಳಿಸಿದೆ.

ಇಮ್ರಾನ್‌ ಖಾನ್‌ ಬಿಡುಗಡೆವರೆಗೂ ರಾಜಧಾನಿ ತೊರೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಇಮ್ರಾನ್‌ ಖಾನ್‌ ಹೋರಾಟಕ್ಕೆ ಮಣಿಯುವುದಿಲ್ಲ ಎಂದು ಪಾಕ್‌ ಸರ್ಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next