Advertisement

ಅಂಡರ್‌-19 ಏಶ್ಯ ಕಪ್‌:ಭಾರತಕ್ಕೆ ಶರಣಾದ ಪಾಕ್‌

12:04 AM Sep 08, 2019 | Team Udayavani |

ಮೊರಟುವಾ (ಶ್ರೀಲಂಕಾ): ಅಂಡರ್‌-19 ಏಶ್ಯ ಕಪ್‌ ಕ್ರಿಕೆಟ್‌ ಕೂಟದ ಬಹು ನಿರೀಕ್ಷೆಯ ಮುಖಾಮುಖೀಯಲ್ಲಿ ಭಾರತ 60 ರನ್ನುಗಳಿಂದ ಪಾಕಿಸ್ಥಾನವನ್ನು ಪರಾಭವಗೊಳಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ, ಆರಂಭಕಾರ ಅರ್ಜುನ್‌ ಆಜಾದ್‌ (121) ಮತ್ತು ವನ್‌ಡೌನ್‌ ಆಟಗಾರ ತಿಲಕ್‌ ವರ್ಮ (110) ಅವರ ಶತಕ ಸಾಹಸದಿಂದ 9 ವಿಕೆಟಿಗೆ 305 ರನ್‌ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಪಾಕಿಸ್ಥಾನ 46.4 ಓವರ್‌ಗಳಲ್ಲಿ 245ಕ್ಕೆ ಆಲೌಟ್‌ ಆಯಿತು. ಪಾಕ್‌ ಸರದಿಯಲ್ಲಿ ನಾಯಕ ರೊಹೈಲ್‌ ನಜೀರ್‌ 117 ರನ್‌ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರೂ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ.

ಭಾರತದ ಬೌಲಿಂಗ್‌ ಸರದಿಯಲ್ಲಿ ಅಥರ್ವ ಅಂಕೋಲೆಕರ್‌ 36ಕ್ಕೆ 3 ವಿಕೆಟ್‌ ಉಡಾಯಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಅಥರ್ವ ಮುಂಬಯಿಯ “ಬೆಸ್ಟ್‌’ ಬಸ್‌ ನಿರ್ವಾಹಕಿಯ ಮಗನೆಂಬುದು ವಿಶೇಷ. ಉಳಿದಂತೆ ವಿದ್ಯಾಧರ್‌ ಪಾಟೀಲ್‌ ಮತ್ತು ಸುಶಾಂತ್‌ ಮಿಶ್ರಾ ತಲಾ 2 ವಿಕೆಟ್‌ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next