ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕುಪ್ವಾರದಲ್ಲಿರುವ ಕೇರನ್ ವಿಭಾಗದ ಮೂಲಕ ದೇಶದೊಳಕ್ಕೆ ಅಕ್ರಮವಾಗಿ ಪ್ರವೇಶಿಸಲೆತ್ನಿಸಿದ ಪಾಕಿಸ್ತಾನಿ ಸೈನಿಕನನ್ನು ಸೇನೆ ಹೊಡೆದುರುಳಿಸಿದೆ.
ಮೃತಪಟ್ಟಿರುವ ವ್ಯಕ್ತಿಯನ್ನು ಮೊಹಮ್ಮದ್ ಶಬೀರ್ ಮಲಿಕ್ ಎಂದು ಗುರುತಿಸಲಾಗಿದೆ. ಆತನ ಬಳಿ ಪಾಕಿಸ್ತಾನದ ರಾಷ್ಟ್ರೀಯ ಗುರುತುಪತ್ರ, ಹಾಗೆಯೇ ಅಲ್ಲಿನ ಸರ್ಕಾರ ನೀಡಿದ ಲಸಿಕೆ ಪ್ರಮಾಣಪತ್ರ ಲಭಿಸಿದೆ.
ಈತ ಪಾಕ್‌ನ ಬ್ಯಾಟ್‌ಗೆ (ಗಡಿ ಕಾರ್ಯಪಡೆ) ಸೇರಿರುವ ವ್ಯಕ್ತಿಯಾಗಿದ್ದಾನೆ. ಆತನಿಂದ ಒಂದು ಎಕೆ ರೈಫಲ್, ಗುಂಡುಗಳು, 7 ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸೇನೆಯ ಹಿರಿಯ ಅಧಿಕಾರಿ ಮೇ.ಜ.ಅಭಿಜಿತ್ ಪೆಂಧಾರ್ಕರ್ ಪಾಕಿಸ್ತಾನ ಕದನ ವಿರಾಮವನ್ನು ಪಾಲನೆ ಮಾಡುತ್ತಿಲ್ಲ. ಶನಿವಾರ ತಡರಾತ್ರಿ 3 ಗಂಟೆಗೆ ಈ ಘಟನೆ ನಡೆದಿದೆ.
ಅಕ್ರಮವಾಗಿ ನುಸುಳುಕೋರರನ್ನು ಗುರುತಿಸುವ ವ್ಯವಸ್ಥೆಯನ್ನು ಗಡಿಯಲ್ಲಿ ಅಳವಡಿಸಿದ್ದರಿಂದ ಈ ಘಟನೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ : ಅರ್ಧ ಗಂಟೆ ಕಾರು ಪ್ರಯಾಣಕ್ಕೆ 10,000 ರೂ. ಶುಲ್ಕ!