Advertisement

ಪೂಂಚ್‌ ವಲಯದಲ್ಲಿ ಪಾಕ್‌ ಸೇನೆಯಿಂದ ಶೆಲ್‌ ದಾಳಿ, ಜೀವಹಾನಿ ಇಲ್ಲ

11:10 AM Nov 20, 2018 | udayavani editorial |

ಜಮ್ಮು : ಪಾಕ್‌ ಸೇನೆ ಇಂದು ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಎಲ್‌ಓಸಿ ಉದ್ದಕ್ಕೂ ಮೋರ್ಟಾರ್‌ ಹಾಗೂ ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ದಾಳಿ ನಡೆಸಿತೆಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಜೀವಹಾನಿ ಆಗಿರುವ ವರದಿಗಳು ಇಲ್ಲ.

Advertisement

ಪೂಂಚ್‌ ವಲಯದ ಫಿಗ್‌ವಾರ್‌ ಮತ್ತು ಮಾಲ್ಟಿ ಪ್ರದೇಶದಲ್ಲಿ ಪಾಕ್‌ ಸೈನಿಕರು ಗುಂಡಿನ ದಾಳಿ ನಡೆಸಿದರು. 

ವರದಿಗಳ ಪ್ರಕಾರ ಪಾಕ್‌ ಸೈನಿಕರು ರಾಜೋರಿ ಜಿಲ್ಲೆಯ ನೌಶೇರಾ ವಲಯದಲ್ಲೂ ಕದನ ವಿರಾಮ ಉಲ್ಲಂಘನೆಗೈದು ಗುಂಡಿನ ದಾಳಿ ನಡೆಸಿದರೆಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next