Advertisement

ಕ್ವಾಡ್‌ಕಾಪ್ಟರ್‌ ಹೊಡೆದುರುಳಿಸಿದ ಪಾಕ್‌?

12:30 AM Mar 17, 2019 | Team Udayavani |

ಇಸ್ಲಾಮಾಬಾದ್‌: ಗಡಿನಿಯಂತ್ರಣಾ ರೇಖೆ ದಾಟಿದ ಭಾರತದ ಕ್ವಾಡ್‌ಕಾಪ್ಟರ್‌ ಒಂದನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಶನಿವಾರ ಹೇಳಿಕೊಂಡಿದೆ. ಗಡಿಯಿಂದ 150 ಕಿ.ಮೀ ಒಳಗೆ ಪಾಕಿಸ್ತಾನದ ಕಡೆಗೆ ಈ ಕ್ವಾಡ್‌ಕಾಪ್ಟರ್‌ ಬಂದಿತ್ತು. ಗೂಢಚಾರಿಕೆ ನಡೆಸುವ ಉದ್ದೇಶದಿಂದ ಈ ಕಾಪ್ಟರ್‌ ಬಂದಿತ್ತು ಎಂದು ಸೇನೆ ವಕ್ತಾರ ಅಸಿಫ್ ಗಫ‌ೂರ್‌ ಹೇಳಿದ್ದಾರೆ. ರಖ್‌ಚಿಕ್ರಿ ವಲಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಭಾರತದ ಗಡಿ ಒಳಕ್ಕೆ ನುಗ್ಗಿದ್ದ ಮೂರು ಡ್ರೋನ್‌ಗಳನ್ನು ಭಾರತ ಹೊಡೆದುರುಳಿಸಿತ್ತು. ಗುಜರಾತ್‌ ಹಾಗೂ ಇತರ ಭಾಗಗಳಲ್ಲಿ ಈ ಡ್ರೋನ್‌ ಉರುಳಿದ್ದು ವರದಿಯಾಗಿತ್ತು. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಬಾಲಕೋಟ್‌ನಲ್ಲಿ ಭಾರತ ಪ್ರತೀಕಾರ ದಾಳಿ ನಡೆಸಿದ ನಂತರದಲ್ಲಿ ಉಭಯ ದೇಶಗಳ ಮಧ್ಯೆ ಸೃಷ್ಟಿಯಾದ ಉದ್ವಿಗ್ನ ವಾತಾವರಣ ಈಗ ತಣ್ಣಗಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next