Advertisement

ಇಮ್ರಾನ್‌ ಬದಲಾವಣೆ ಸನ್ನಿಹಿತ ; ಅಸಿಫ್ ಜರ್ದಾರಿ ಮುಂದಿನ ಪ್ರಧಾನಿ?

11:55 PM Feb 13, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಮತ್ತೆ ರಾಜಕೀಯ ಬದಲಾವಣೆಯ ಗಾಳಿ ಬೀಸುತ್ತಿದೆ. ಇತ್ತೀಚೆಗಷ್ಟೇ ತನ್ನ ಸಚಿವರ ಕಾರ್ಯಕ್ಷಮತೆ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಕೆಳಗಿಳಿಸಲು ಅಲ್ಲಿನ ವಿಪಕ್ಷಗಳು ಒಟ್ಟಾಗಿವೆ. ಇಮ್ರಾನ್‌ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಈ ಪಕ್ಷಗಳು ಮುಂದಾಗಿವೆ.

Advertisement

ವಿಪಕ್ಷಗಳಾದ ಪಾಕಿಸ್ಥಾನ ಪೀಪಲ್ಸ್‌ ಪಾರ್ಟಿ, ಪಾಕಿಸ್ಥಾನ ಸರಕಾರದ ಭಾಗವಾಗಿರುವ ಪಾಕಿಸ್ಥಾನ ತೆಹ್ರಿಕ್‌ ಇ ಇನ್ಸಾಫ್, ಮುತ್ತಹಿದಾ ಖ್ವಾಮಿ ಮೂವ್‌ಮೆಂಟ್‌, ಪಾಕಿಸ್ಥಾನ ಮುಸ್ಲಿಂ ಲೀಗ್‌(ಪಿಎಂಎಲ್‌-ಕ್ಯು)ಗಳು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿವೆ.

ಶುಕ್ರವಾರವೇ ಈ ಬಗ್ಗೆ ನಿರ್ಧಾರ ಮಾಡಿರುವ ಪಕ್ಷಗಳು ಪರಸ್ಪರ ಮಾತುಕತೆಯಲ್ಲಿ ತೊಡಗಿವೆ. ಸರಕಾರ ಉರುಳಿದ ಮೇಲೆ ಪ್ರಧಾನಿಯಾಗಲು ಪಿಎಂಎಲ್‌-ಎನ್‌ ಪಕ್ಷದ ನವಾಜ್‌ ಷರೀಪ್‌ ಒಪ್ಪಿಲ್ಲ. ಹೀಗಾಗಿ, ಪಿಪಿಪಿಯ ಆಸಿಫ್ ಅಲಿ ಜರ್ದಾರಿ ಅವರು ಪ್ರಧಾನಿಯಾಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ವಕೀಲ ಜಗದೀಶ್‌ ಸೆರೆ: 14 ದಿನ ನ್ಯಾಯಾಂಗ ಬಂಧನ

ಇತ್ತೀಚೆಗಷ್ಟೇ ಪಿಎಂಎಲ್‌-ಎನ್‌ನ ಉಪಾಧ್ಯಕ್ಷೆಯಾಗಿರುವ ಮರ್ಯಾಮ್‌ ನವಾಜ್‌, “”ಸರಕಾರದ ವಿರುದ್ಧ ನಾವೇನಾದರೂ ಕ್ರಮ ತೆಗೆದುಕೊಳ್ಳದಿದ್ದರೆ ಜನ ನಮ್ಮ ಮೇಲೆ ಭರವಸೆ ಕಳೆದುಕೊಳ್ಳುತ್ತಾರೆ” ಎಂದಿದ್ದರು.

Advertisement

ಪ್ರಧಾನಿ ಇಮ್ರಾನ್‌ ಖಾನ್‌, ಚುನಾವಣೆ ವೇಳೆಯಲ್ಲಿ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಿಕೊಳ್ಳಲು ಆಗಲಿಲ್ಲ. ಇದಕ್ಕೆ ವ್ಯವಸ್ಥೆಯೇ ಕಾರಣ. ಪಕ್ಷದ ಸಚಿವರೂ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ ಎಂದು ಹೇಳಿದ್ದರು. ಈ ಮೂಲಕ ಜನರ ಆಸೆಗಳನ್ನು ಈಡೇರಿಸುವಲ್ಲಿ ಸೋತಿದ್ದಾಗಿ ಹೇಳಿಕೊಂಡಿದ್ದರು.

ಧರ್ಮ ನಿಂದನೆ ಆರೋಪ: ವ್ಯಕ್ತಿ ಹತ್ಯೆ 
ಪಾಕಿ­ಸ್ಥಾನದ ಪಂಜಾಬ್‌  ಪ್ರಾಂತ್ಯದ ಕುಗ್ರಾಮ­ವೊಂದರಲ್ಲಿ ಧರ್ಮ ನಿಂದನೆ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ವ್ಯಕ್ತಿಯನ್ನು ಕಲ್ಲು ಹೊಡೆದು ಹತ್ಯೆ ಮಾಡಲಾಗಿದೆ. ಆತನನ್ನು ಮರದ ಕೊಂಬೆಗೆ ಇಳಿಬಿಟ್ಟು ಇಟ್ಟಿಗೆಗಳಿಂದ ಹೊಡೆದು ಕೊಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next