Advertisement

ಪಿಒಕೆ ಹವಾಮಾನ ವರದಿಯಲ್ಲಿ ಪಾಕ್‌ಗೆ ಪ್ರಬಲ ಸಂದೇಶ

06:41 PM May 12, 2020 | Hari Prasad |

ಭಾರತದ ಹವಾಮಾನ ಇಲಾಖೆಯು ಗಿಲ್ಗಿಟ್‌ – ಬಾಲ್ಟಿಸ್ತಾನ, ಮುಜಫ‌ರಾಬಾದ್‌ ಸೇರಿದಂತೆ ಪಾಕ್‌ ಆಕ್ರಮಿತ ಕಾಶ್ಮೀರದ ಪ್ರದೇಶಗಳ ಹವಾಮಾನ ವರದಿ ಪ್ರಕಟಿಸಲಾರಂಭಿಸಿದೆ.

Advertisement

ತನ್ಮೂಲಕ ಈ ಭಾಗಗಳೆಲ್ಲ ಭಾರತದ ಅವಿಭಾಜ್ಯ ಅಂಗವೆಂದು ಪಾಕಿಸ್ತಾನಕ್ಕೆ ಭರ್ಜರಿ ಚಾಟಿ ಬೀಸಿದೆ ಭಾರತ. ಈ ವಿಷಯದಿಂದ ಕೆಂಡಾಮಂಡಲವಾದ ಪಾಕಿಸ್ತಾನ, ಲಡಾಖ್‌ನ ಹವಾಮಾನ ವರದಿ ನೀಡಲು ಹೋಗಿ ಅವಮಾನಕ್ಕೀಡಾಗಿದೆ.

ಗಿಲ್ಗಿಟ್‌ – ಬಾಲ್ಟಿಸ್ಥಾನ್ ಪ್ರದೇಶದಲ್ಲಿ ಚುನಾವಣ ಕುತಂತ್ರ
ಇತ್ತೀಚೆಗೆ ಪಾಕ್‌ ಸುಪ್ರೀಂ ಕೋರ್ಟ್‌, ಗಿಲ್ಗಿಟ್‌ – ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಬಹುದೆಂದು ಪಾಕಿಸ್ಥಾನ ಸರಕಾರಕ್ಕೆ ಸೂಚನೆ ನೀಡಿದೆ.

ಆದರೆ, ಈ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಲ್ಲಿ ಪಾಕ್‌ ಚುನಾವಣೆ ನಡೆಸಲು ಆಗುವುದಿಲ್ಲ ಎಂದು ಭಾರತ ಗಟ್ಟಿ ಸಂದೇಶ ಕಳುಹಿಸಿತ್ತು.

ಈ ಸಂದೇಶದ ಭಾಗವಾಗಿಯೇ ಭಾರತ ಆ ಪ್ರದೇಶದ ಹವಾಮಾನ ವರದಿಯನ್ನು ನಿತ್ಯ ಬಿತ್ತರಿಸಲು ನಿರ್ಧರಿಸಿದೆ.

Advertisement

ಮೊದಲಿಂದಲೂ ಬಿತ್ತರ ಆಗುತ್ತಿದೆ ಪಿಒಕೆ ಸುದ್ದಿ

1) ಪಾಕ್‌ ಆಕ್ರಮಿತ ಕಾಶ್ಮೀರದ ಸುದ್ದಿಯನ್ನು ಡಿಡಿ ಕಶಿರ್‌ (ದೂರದರ್ಶನ ಜಮ್ಮು-ಕಾಶ್ಮೀರ) 1992ರಿಂದ ವರದಿ ಮಾಡುತ್ತಲೇ ಬರುತ್ತಿದೆ.

2) ಭಾರತ ಸರಕಾರ ಆರಂಭಿಸಿದ ‘ಡಿಡಿ ಫ್ರೀ ಡಿಶ್‌’ನ ಪ್ರಸರಣ ವ್ಯಾಪ್ತಿಯೂ ಸಹ ಪಾಕ್‌ ಆಕ್ರಮಿತ ಕಾಶ್ಮೀರದವರೆಗೂ ಇರುವ ಕಾರಣ, ಅಲ್ಲಿನ ಜನರೂ ದೂರದರ್ಶನ ವಾಹಿನಿಗಳನ್ನು, ಚಾನೆಲ್‌ಗಳನ್ನು ನೋಡುತ್ತಾರೆ..

3) ಭಾರತವು  1992ರಿಂದಲೂ ‘ರೇಡಿಯೋ ಕಾಶ್ಮೀರ’ದ ಮೂಲಕ ಪಾಕ್‌ನ ಕುತಂತ್ರವನ್ನು ಬಯಲು ಮಾಡುವ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ ಬಂದಿದೆ. ಕಳೆದ ವರ್ಷ ಆರ್ಟಿಕಲ್‌ 370 ಹಿಂಪಡೆದ ಮೇಲೆ ರೇಡಿಯೋ ಕಾಶ್ಮೀರದ ಹೆಸರನ್ನು ಆಲ್‌ ಇಂಡಿಯಾ ರೇಡಿಯೋ ಎಂದು ಬದಲಿಸಲಾಗಿದೆ.

1947ರಲ್ಲಿ, ಪಾಕಿಸ್ಥಾನವು ತನ್ನ ಸೇನೆ ಮತ್ತು ಪಶ್ತೂನ್‌ ಬಂಡುಕೋರರ ಸಹಾಯದಿಂದ ಕಾಶ್ಮೀರದ ಬಹುಭಾಗವನ್ನು ಆಕ್ರಮಿಸಿತು. ಅನ‌ಂತರ ನಮ್ಮ ಸೇನೆಯು ಪಾಕ್‌ ಅನ್ನು ಹಿಮ್ಮೆಟಿಸಿತಾದರೂ, ಗಿಲ್ಗಿಟ್‌ – ಬಾಲ್ಟಿಸ್ಥಾನ ಅದರ ವಶದಲ್ಲಿಯೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next