Advertisement

‘ಪಾಕ್‌ ಸಚಿವ ಕಾದ್ರಿ, ಸಯೀದ್‌ ಜತೆಗೆ ವೇದಿಕೆ ಹಂಚಿಕೊಂಡದ್ದು ತಪ್ಪು’

12:26 PM Oct 04, 2018 | udayavani editorial |

ವಾಷಿಂಗ್ಟನ್‌ : ಅಚ್ಚರಿಯ ವಿದ್ಯಮಾನವೊಂದರಲ್ಲಿ ಪಾಕ್‌ ಕ್ಯಾಬಿನೆಟ್‌ ಸಚಿವ ನೂರ್‌ ಉಲ್‌ ಹಕ್‌ ಕಾದ್ರಿ ಅವರು 2008ರ ಮುಂಬಯಿ ದಾಳಿಯ ಸೂತ್ರಧಾರನಾಗಿರುವ ಉಗ್ರ ಹಾಫೀಜ್‌ ಸಯೀದ್‌ ಜತೆ ವೇದಿಕೆ ಹಂಚಿಕೊಂಡಿರುವುದು ತಪ್ಪು ಎಂಬುದನ್ನು  ಪಾಕಿಸ್ಥಾನದ ವಿದೇಶ ಸಚಿವ ಶಾ ಮೆಹಮೂದ್‌ ಕುರೇಶಿ ಒಪ್ಪಿಕೊಂಡಿದ್ದಾರೆ.

Advertisement

ಸಯೀದ್‌ ಜತೆಗೆ ವೇದಿಕೆ ಹಂಚಿಕೊಳ್ಳುವ ವಿಷಯದಲ್ಲಿ ಸಚಿವ ಕಾದ್ರಿ ಅವರು ಸ್ವಲ್ಪವಾದರೂ ಸೂಕ್ಷ್ಮತೆ ಮತ್ತು ವಿವೇಚನೆಯನ್ನು ತೋರಬೇಕಿತ್ತು; ಅವರು ಹಾಗೆ ಮಾಡದಿರುವುದು ತಪ್ಪು ಎಂದು ಕುರೇಶಿ ಅವರು ವಾಷಿಂಗ್ಟನ್‌ ಕಾರ್ಯಕ್ರಮದಲ್ಲಿ ಸಭಿಕರ ಮುಂದೆ ಒಪ್ಪಿಕೊಂಡರು.

ಪಾಕ್‌ ಕ್ಯಾಬಿನೆಟ್‌ನ ಧಾರ್ಮಿಕ ವ್ಯವಹಾರಗಳ ಸಚಿವ ಕಾದ್ರಿ ಅವರು ಇಸ್ಲಾಮಾಬಾದ್‌ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆಯ ಮುಖ್ಯಸ್ಥ ಸಯೀದ್‌ ಜತೆಗೆ ವೇದಿಕೆ ಹಂಚಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next