Advertisement

ಜಮ್ಮು ಕಾಶ್ಮೀರ ಸಾಂಬಾ ಅಂತಾರಾಷ್ಟ್ರೀಯ ಗಡಿ ದಾಟಿ ಬಂದ ಪಾಕ್‌ ವ್ಯಕ್ತಿ ಅರೆಸ್ಟ್‌

09:46 AM May 10, 2019 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯ ದಾಟಿ ಒಳ ಬಂದ ಪಾಕಿಸ್ಥಾನೀ ಅಗಂತುಕನನ್ನು ಗಡಿ ಭದ್ರತಾ ಪಡೆಯವರು (ಬಿಎಸ್‌ಎಫ್) ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಬಂಧಿತ ಆಗಂತುಕನನ್ನು ಪ್ರಶ್ನಿಸಿದಾಗ ಆತನು ತನ್ನ ಹೆಸರು ಮೊಹಮ್ಮದ್‌ ಅಫ್ಜಲ್‌ ಎಂದೂ ತಾನು ಪಾಕಿಸ್ಥಾನದ ಶಕೇರ್‌ಗಢ ಜಿಲ್ಲೆಯ ನಿವಾಸಿ ಎಂದೂ ಹೇಳಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next