Advertisement

ಪಾಕ್ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ 200 ಕೊಳೆತ ಶವಗಳು ಪತ್ತೆ; ವಿಡಿಯೋ ವೈರಲ್, ಆಕ್ರೋಶ

01:14 PM Oct 15, 2022 | Team Udayavani |

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಾರ್ವಜನಿಕ ವಲಯದ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ನೂರಾರು ಕೊಳೆತ ನಗ್ನ ಶವಗಳು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಆಕ್ರೋಶ ಭುಗಿಲೆದ್ದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಭಾರತ- ಲಂಕಾ ನಡುವೆ ವನಿತಾ ಏಷ್ಯಾ ಕಪ್ ಫೈನಲ್: ಟಾಸ್ ಗೆದ್ದ ಚಾಮರಿ ಅತ್ತಪಟ್ಟು

ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ಶುಕ್ರವಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಆರೋಗ್ಯ ಇಲಾಖೆಯ ಕಾರ್ಯದರ್ಶಿ ಮುಝಾಮಿಲ್ ಬಶೀರ್ ನೇತೃತ್ವದಲ್ಲಿ ಆರು ಮಂದಿ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ವರದಿ ವಿವರಿಸಿದೆ.

ಏನಿದು ವಿವಾದ…ಒಬ್ಬರು ನನಗೆ ಶವಾಗಾರಕ್ಕೆ ಹೋಗಿ ವೀಕ್ಷಿಸಿ ಎಂದಿದ್ದರು!

ಎಎನ್ ಐ ವರದಿ ಪ್ರಕಾರ, ಗುಜ್ಜಾರ್ ಅವರು ನಿಶ್ತಾರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಬಂದು, ನೀವು ಒಳ್ಳೆಯ ಕೆಲಸ ಮಾಡಲು ಬಯಸಿದರೆ ಒಮ್ಮೆ ಶವಾಗಾರಕ್ಕೆ ಹೋಗಿ ವೀಕ್ಷಿಸಿ ಎಂದು ಸಲಹೆ ನೀಡಿರುವುದಾಗಿ ತಿಳಿಸಿದೆ.

Advertisement

ಅವರ ಬೇಡಿಕೆಯಂತೆ ಗುಜ್ಜಾರ್ ಅವರು ಅಲ್ಲಿಗೆ ಹೋದಾಗ ಸಿಬಂದಿ ಶವಾಗಾರದ ಬಾಗಿಲು ತೆರೆಯಲು ಮೀನಮೇಷ ಎಣಿಸುತ್ತಿದ್ದಾಗ…ಒಂದು ವೇಳೆ ನೀನೀಗ ಶವಾಗಾರದ ಬಾಗಿಲು ತೆರೆಯದಿದ್ದರೆ ನಿನ್ನ (ಸಿಬಂದಿ) ವಿರುದ್ಧ ಎಫ್ ಐಆರ್ ದಾಖಲಿಸುತ್ತೇನೆ ಎಂದು ಗುಜ್ಜಾರ್ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

ಕೊನೆಗೂ ಆತ ಬಾಗಿಲು ತೆರೆದ ನಂತರ ಒಳ ಹೋದರೆ…ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಕನಿಷ್ಠ 200 ಶವಗಳು ಪತ್ತೆಯಾಗಿದ್ದವು. ಎಲ್ಲಾ (ಗಂಡಸರು, ಮಹಿಳೆಯರು) ನಗ್ನ ಶವಗಳು ಕೊಳೆತು ಹೋಗಿದ್ದವು. ಮಹಿಳೆಯರ ಶವಗಳ ಮೇಲೆ ಯಾವ ಹೊದಿಕೆಯನ್ನೂ ಹಾಕಿರಲಿಲ್ಲವಾಗಿತ್ತು ಎಂದು ಗುಜ್ಜಾರ್ ಆರೋಪಿಸಿದ್ದಾರೆ.

ಈ ಬಗ್ಗೆ ಗುಜ್ಜಾರ್ ವೈದ್ಯರ ಬಳಿ ವಿವರಣೆ ಕೇಳಿದಾಗ, ಈ ಶವಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣದ ಉದ್ದೇಶಕ್ಕಾಗಿ ಬಳಸುತ್ತಿರುವುದಾಗಿ ಸಮಜಾಯಿಷಿ ನೀಡಿರುವುದಾಗಿ ವರದಿ ವಿವರಿಸಿದೆ.

ಅನಾಥ ಶವಗಳ ಅಂತ್ಯಕ್ರಿಯೆ ನಡೆಸುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದು, ಈ ಪ್ರಕರಣದಲ್ಲಿ ಶಾಮೀಲಾದವರ ವಿರುದ್ಧ ಆರೋಗ್ಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next