Advertisement
ಈ ಬೆಳವಣಿಗೆಯು ಸಿಂಧ್ ಪ್ರಾಂತ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂದು ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗವು ಸ್ಥಳೀಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದೆ.ಇತ್ತೀಚೆಗೆ, ಪಾಕಿಸ್ತಾನದ ಮಹಿಳೆಯೊಬ್ಬಳು ಪಬ್ಜಿ ಮೂಲಕ ಪರಿಚಯವಾದ ಭಾರತೀಯ ಯುವಕನ ಪ್ರೀತಿಗೆ ಬಿದ್ದು, ನಾಲ್ಕು ಮಕ್ಕಳ ಸಮೇತ ಭಾರತಕ್ಕೆ ಬಂದಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಕೆಲವು ಉಗ್ರ ಗುಂಪುಗಳು ಭಾರತೀಯ ಸಮುದಾಯಕ್ಕೆ ಬೆದರಿಕೆ ಹಾಕಿದ್ದವು. ಬಂದೂಕುಧಾರಿಗಳ ಗುಂಪು, 30 ಮಂದಿ ಅಲ್ಪಸಂಖ್ಯಾತ ಹಿಂದೂಗಳನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದೆ. ಜತೆಗೆ, ಹೈಗ್ರೇಡ್ ಶಸ್ತ್ರಾಸ್ತ್ರಗಳ ಮೂಲಕ ಹಿಂದೂ ದೇಗುಲಗಳ ಮೇಲೆ ದಾಳಿ ಮಾಡುವುದಾಗಿಯೂ ಈ ಗ್ಯಾಂಗ್ ಬೆದರಿಕೆ ಹಾಕಿದೆ.