Advertisement
ಗಲ್ಫ್ ನ ಬಹುತೇಕ ರಾಷ್ಟ್ರಗಳು ಭಾರತದ ಜತೆಗಿದ್ದು, ಉತ್ತಮ ಸಂಬಂಧ ಹೊಂದಿವೆ. ಜತೆಗೆ ಕಾಶ್ಮೀರದ ವಿಚಾರದಲ್ಲಿ ಬಹುತೇಕ ದೇಶಗಳು ಭಾರತದ ಬೆನ್ನಿಗಿವೆ. ಹೀಗಾಗಿ ಭಾರತದ ವಿರುದ್ಧ ಹೊಸ ಮಾದರಿಯ ಅಪಪ್ರಚಾರಕ್ಕೆ ಮುಂದಾಗಿರುವ ಪಾಕ್ ಇದಕ್ಕಾಗಿ ಏಳು ಸಾವಿರ ನಕಲಿ ಟ್ವಿಟರ್ ಖಾತೆಗಳನ್ನು ಬಳಸಿಕೊಳ್ಳುತ್ತಿದೆ.
ಭಾರತದಲ್ಲಿ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸುಳ್ಳು ಸುದ್ದಿಯನ್ನು ಗಲ್ಫ್ ದೇಶಗಳಲ್ಲಿ ಹಂಚುವುದು ಈ ಟ್ವಿಟರ್ ಖಾತೆಗಳ ಉದ್ದೇಶ. ಇದಕ್ಕಾಗಿ ಕಾಶ್ಮೀರದಲ್ಲಿ ಹತ ಉಗ್ರರ ಫೋಟೋ ಹಾಕಿ, ತಪ್ಪು ಮಾಹಿತಿ ನೀಡಲಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ ನಡೆದ ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದಲ್ಲಿ ಮುಸ್ಲಿಮರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ದೂರಿದ್ದರು. ಭಾರತದ ವಿರುದ್ಧ ಗಲ್ಫ್ ದೇಶಗಳನ್ನು ಎತ್ತಿಕಟ್ಟುವುದೇ ಅವರ ಉದ್ದೇಶ. ಅದರ ಭಾಗವಾಗಿಯೇ ಈ ಟ್ವಿಟರ್ ಅಭಿಯಾನ ನಡೆಯುತ್ತಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. ಇದರಿಂದ ಗಲ್ಫ್ ಮತ್ತು ಭಾರತದ ನಡುವಿನ ಸಂಬಂಧ ಹಳಸುವುದಿಲ್ಲ, ಗಟ್ಟಿಯಾಗಿದೆ ಎಂದಿದ್ದಾರೆ.
Related Articles
ಕೆಲವು ದಿನಗಳ ಹಿಂದೆ ಭಾರತೀಯ ಗುಪ್ತಚರ ಇಲಾಖೆಯು ಭಾರತ ಸರಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿತ್ತು. ಅದರಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪಾಕಿಸ್ಥಾನವು ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಭಾರತವನ್ನು ಮುಸ್ಲಿಂ ವಿರೋಧಿ ರಾಷ್ಟ್ರವೆಂದು ಬಿಂಬಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಈ ವರ್ಷದ ಜನವರಿ-ಮಾರ್ಚ್ ನಡುವೆ ಸೃಷ್ಟಿಸಲಾದ ಟ್ವಿಟರ್ ಖಾತೆಗಳ ಮೂಲಕ ಈ ಅಪಪ್ರಚಾರ ನಡೆಸಲಾಗುತ್ತಿದ್ದು, ಕೊಲ್ಲಿ ರಾಷ್ಟ್ರಗಳ ಬಹುತೇಕ ಜನರು ಇದನ್ನು ನಂಬತೊಡಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.
Advertisement