ಕಾರವಾರ: ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಬೆಂಬಲ ಗಳಿಸಲು ವಿಫಲವಾದ ನೆರೆ ರಾಷ್ಟ್ರ ಪಾಕಿಸ್ತಾನ ಅರಬ್ಬಿ ಸಮುದ್ರದಲ್ಲಿ ಸಮರಾಭ್ಯಾಸಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರ ಬಳಿಯ ಐಎನ್‌ಎಸ್ ಕದಂಬ ನೌಕಾ ನೆಲೆಯಲ್ಲಿ ಕಟ್ಟೆಚ್ಚರದಲ್ಲಿದ್ದು, ತನ್ನೆಲ್ಲ ಯುದ್ಧ ನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಟ್ಟಿದೆ.ಯಾವುದೇ ಸ್ಥಿತಿಯನ್ನು ಎದುರಿಸಲು ನಾವು ಸಿದ್ಧ ಎಂದು ಭಾರತೀಯ ನೌಕಾದಳದ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನವು ಉತ್ತರ ಅರಬ್ಬಿ ಸಮುದ್ರ ದಲ್ಲಿ ಆ.25ರಿಂದ ಸಮರಾಭ್ಯಾಸ ನಡೆಸಲು ಆರಂಭಿಸಿದ್ದು, ಸೆ.29ರವರೆಗೆ ಮುಂದುವರಿ ಯಲಿದೆ. ಲೈವ್ ಫೈರ್ ಡ್ರಿಲ್, ಕ್ಷಿಪಣಿ ಪರೀ ಕ್ಷೆಗಳು ನಡೆಯುತ್ತವೆ ಎಂದು ಪಾಕಿಸ್ತಾನ ವಾಣಿಜ್ಯ ನೌಕೆಗಳಿಗೆ ಎಚ್ಚರಿಕೆ ನೀಡಿದೆ. ಪಾಕ್‌ನ ಕಾರ್ಯಾಚರಣೆ ಸಾಮರ್ಥ್ಯ ಹಾಗೂ ನೌಕಾ ವಿನ್ಯಾಸದ ದಿನಚರಿಯಲ್ಲಿ ಬದಲಾಗುವ ಅಂಶಗಳನ್ನು ನೌಕಾಪಡೆ ಹಾಗೂ ಭಾರತೀಯ ವಾಯುಪಡೆ ಮೂಲಕ ಗಮನಿಸಲಾಗುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಪಾಕ್ ಸಮರಾಭ್ಯಾಸದ ಭಾರತ ಹದ್ದಿನ ಕಣ್ಣಿಟ್ಟಿದೆ. ಇದಕ್ಕಾಗಿಯೇ ಯುದ್ಧ ನೌಕೆಗಳು, ಸಬ್‌ಮರೀನ್‌ಗಳು, ಗಸ್ತು ವಿಮಾನಗಳು ಮತ್ತು ಯುದ್ಧ ವಿಮಾನಗಳನ್ನು ಭಾರತ ನಿಯೋಜಿಸಿದೆ. ಪಶ್ಚಿಮ ಕರಾವಳಿಯ ಕಾರ ವಾರ, ಕೊಚಿನ್, ಗೋವಾ, ಮುಂಬೈಗಳಲ್ಲಿನ ನೌಕಾನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಹುತೇಕ ಯುದ್ಧ ಹಡಗುಗಳನ್ನು ಪೂರ್ವ ಕರಾವಳಿಯಿಂದ ಪಶ್ಚಿಮ ಭಾಗಕ್ಕೆ ತರ ಲಾಗುವುದು. ಇದು ಪಾಕಿಸ್ತಾನದ ಸಮರಾ ಭ್ಯಾಸ ಮುಗಿಯುವ ವರೆಗೂ ಮುಂದು ವರಿಯಲಿದೆ ಎಂದು ತಿಳಿದು ಬಂದಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದುಗೊಳಿಸಿದ ಬಳಿಕ, ದಾಳಿ ಬೆದರಿಕೆಗಳು ಅಧಿಕವಾಗಿವೆ. ಸಮರಾಭ್ಯಾ ಸದಲ್ಲಿ ಪಾಕಿಸ್ತಾನದ 7ರಿಂದ 8 ಯುದ್ಧ ನೌಕೆಗಳು ಭಾಗಿಯಾಗಿವೆ. ಫೆ.26ರಂದು ಬಾಲಾಕೋಟ್‌ನಲ್ಲಿ ಜೈಷ್ -ಇ- ಮೊಹ ಮ್ಮದ್ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ ದಾಗಿನಿಂದ ಭಾರತೀಯ ಸೇನಾ ಪಡೆಗಳು ಯಾವುದೇ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿವೆ. ಸಮರಾಭ್ಯಾಸ ಗಮನಿಸಲು ಭಾರತೀಯ ನೌಕಾ ಪಡೆ ಅತ್ಯಾಧುನಿಕ ಪೊಸೆಡೈನ್-8ಐ ಗಸ್ತು ವಿಮಾನ ನಿಯೋಜಿ ಸಿದೆ ಎಂದು ರಕ್ಷಣಾ ಮೂಲಗಳು ಹೇಳಿವೆ.