Advertisement

ಅಜೇಯ ನ್ಯೂಜಿಲ್ಯಾಂಡಿಗೆ ಪಾಕ್‌ ಸವಾಲು

09:12 AM Jun 27, 2019 | sudhir |

ಬರ್ಮಿಂಗ್‌ಹ್ಯಾಮ್‌: ವಿಶ್ವಕಪ್‌ ಟೂರ್ನಿಯಲ್ಲಿ ಅಜೇಯ ತಂಡವಾಗಿರುವ ನ್ಯೂಜಿಲ್ಯಾಂಡ್‌ ಬುಧವಾರದ ಬರ್ಮಿಂಗ್‌ಹ್ಯಾಮ್‌ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ.

Advertisement

ಭಾರತದ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಹಲವು ಟೀಕೆಗಳಿಗೆ ಗುರಿಯಾಗಿ ಮನನೊಂದಿದ್ದ ಪಾಕಿಸ್ಥಾನ ತಂಡ ರವಿವಾರ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್‌ಗಳ ಗೆಲುವಿನ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇದೇ ಉತ್ಸಾಹದಲ್ಲಿ ಸಫ‌ìರಾಜ್‌ ಪಡೆ ನ್ಯೂಜಿಲ್ಯಾಂಡ್‌ಗೆ ಸೋಲಿನ ರುಚಿ ತೋರಿಸಲು ಕಾಯುತ್ತಿದೆ. ಆದರೆ ಕಿವೀಸ್‌ಗೆ ಸೋಲುಣಿಸುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ನ್ಯೂಜಿಲ್ಯಾಂಡ್‌ ಈ ವಿಶ್ವಕಪ್‌ನಲ್ಲಿ ಅಮೋಘವಾಗಿ ಆಡುತ್ತಿದೆ. ಅಜೇಯ ತಂಡವಾಗಿ ಮುನ್ನುಗ್ಗುತ್ತಿದೆ. ಮಾತ್ರವಲ್ಲದೇ ನಾಯಕ ಕೇನ್‌ ವಿಲಿಯಮ್ಸನ್‌ ಪ್ರಚಂಡ ಫಾರ್ಮ್ನಲ್ಲಿರುವುದನ್ನು ಮರೆಯುವಂತಿಲ್ಲ.

ಅವರು ಸತತ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಿಶ್ವಕಪ್‌ನಲ್ಲಿ ಪಾಕ್‌ ಮೇಲುಗೈ
ವಿಶ್ವಕಪ್‌ನಲ್ಲಿ ಇಷ್ಟರವರೆಗಿನ ಮುಖಾ ಮುಖೀಯನ್ನು ಗಮನಿಸಿದಾಗ ಪಾಕಿಸ್ಥಾನ ಮೇಲುಗೈ ಸಾಧಿಸಿದೆ. ಒಟ್ಟಾರೆ 8 ಪಂದ್ಯಗಳು ನಡೆದಿದ್ದು ಪಾಕಿಸ್ಥಾನ ಆರರಲ್ಲಿ ಜಯಭೇರಿ ಬಾರಿಸಿದ್ದರೆ ನ್ಯೂಜಿಲ್ಯಾಂಡ್‌ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ ಈ ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡಿನ ನಿರ್ವಹಣೆ ಉತ್ಕೃಷ್ಟ ಮಟ್ಟದಲ್ಲಿದೆ. ಅಗ್ರಸ್ಥಾನದಲ್ಲಿರುವ ಅದು ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಅಸಾಧಾರಣ ನಿರ್ವಹಣೆ ನೀಡುತ್ತಿದೆ. ಪಾಕಿಸ್ಥಾನವನ್ನು ಮೆಟ್ಟಿ ನಿಲ್ಲಲು ಹಾತೊರೆಯುತ್ತಿದೆ.

ಪಾಕ್‌ಗೆ ಆಮಿರ್‌ ಬಲ
ಪಾಕಿಸ್ಥಾನದ ಪ್ರಮುಖ ಅಸ್ತ್ರ ಮೊಹಮ್ಮದ್‌ ಆಮಿರ್‌ ಘಾತಕ ಬೌಲಿಂಗ್‌ ದಾಳಿ ನಡೆಸಿ ಎದುರಾಳಿಗಳನ್ನು ಆರಂಭದಲ್ಲೆ ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಅವರಿಗೆ ವಹಾಬ್‌ ರಿಯಾಜ್‌, ಶಾದಾಬ್‌ ಖಾನ್‌ ಉತ್ತಮ ಸಾಥ್‌ ನೀಡುತ್ತಿರುವುದರಿಂದ ಬೌಲಿಂಗ್‌ ಪಡೆ ಬಲಿಷ್ಠ ಎನ್ನಬಹುದು. ತಂಡದ ಬ್ಯಾಟಿಂಗ್‌ ಕೂಡ ಬಲಿಷ್ಠವಾಗಿದೆ. ಆದರೆ ಎಲ್ಲ ಸಮಯದಲ್ಲೂ ಇವರನ್ನು ನಂಬಲು ಆಗುತ್ತಿಲ್ಲ. ಫ‌ಕಾರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ನಾಯಕ ಸಫ‌ìರಾಜ್‌ ಅಹ್ಮದ್‌, ಹ್ಯಾರಿಸ್‌ ಸೊಹೈಲ್‌ ದಕ್ಷಿಣ ಆಫ್ರಿಕಾದ ವಿರುದ್ಧ ತೋರಿದ ಬ್ಯಾಟಿಂಗ್‌ ಶೈಲಿಯನ್ನು ಈ ಪಂದ್ಯದಲ್ಲೂ ತೋರಿದ್ದೇ ಆದಲ್ಲಿ ಪಾಕ್‌ಗೆ ಗೆಲುವು ನಿಶ್ಚಿತ ಎನ್ನಲಡ್ಡಿಯಿಲ್ಲ.

Advertisement

ಕಿವೀಸ್‌ಗೆ ಅದೃಷ್ಟದ ಬಲ
ನ್ಯೂಜಿಲ್ಯಾಂಡ್‌ ಈ ಬಾರಿಯ ವಿಶ್ವಕಪ್‌ನಲ್ಲಿ ಅಜೇಯ ತಂಡವಾಗಿ ಗುರುತಿಸಿಕೊಂಡಿದೆ. ಶನಿವಾರದ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಇನ್ನೇನು ಸೋಲಿನ ಅಂಚಿನಲ್ಲಿದ್ದ ಕಿವೀಸ್‌ 5 ರನ್‌ಗಳ ರೋಚಕ ಗೆಲುವು ಸಾಧಿಸಿದ್ದು ಕಿವೀಸ್‌ ಪಾಲಿಗೆ ಅದೃಷ್ಟ ಕೈಹಿಡಿಯುತ್ತಿದೆ ಎನ್ನುವುದಕ್ಕೆ ಉತ್ತಮ ನಿದರ್ಶನ ಎನ್ನಲಡ್ಡಿಯಿಲ್ಲ. ಸತತ ಎರಡು ಶತಕ ಸಿಡಿಸಿರುವ ನಾಯಕ ಕೇನ್‌ ವಿಲಿಯಮ್ಸನ್‌ ಅವರ ಜವಾಬ್ದಾರಿಯುತ ಆಟ ತಂಡದ ಬಲವನ್ನು ಹೆಚ್ಚಿಸಿದೆ. ಆರಂಭಿಕ ಆಟಗಾರರಾದ ಮಾರ್ಟಿನ್‌ ಗಪ್ಟಿಲ್‌ ಮತ್ತು ಕಾಲಿನ್‌ ಮನ್ರೊà ಫಾರ್ಮ್ ಕಳೆದುಕೊಂಡಿದ್ದು ತಂಡಕ್ಕೆ ಹಿನ್ನಡೆಯಾಗಿದೆ. ಈ ಪಂದ್ಯದಲ್ಲಿ ಇವರ ಆಕ್ರಮಣಕಾರಿ ಆಟ ಅತ್ಯಗತ್ಯವಾಗಿದ್ದು ಮತ್ತೆ ತಂಡಕ್ಕೆ ಬಲ ತುಂಬಬೇಕಿದೆ.

ತಂಡದ ಬೌಲಿಂಗ್‌ ಹೆಚ್ಚು ಘಾತಕವಾಗಿದೆ. ಅನುಭವಿ ಟ್ರೆಂಟ್‌ ಬೌಲ್ಟ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಉಳಿದಂತೆ ಲ್ಯಾಕಿ ಫ‌ರ್ಗ್ಯುಸನ್‌, ಮ್ಯಾಟ್‌ ಹೆನ್ರಿ, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥ ರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next