ಇಸ್ಲಾಮಾಬಾದ್ : ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ( ISI) ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಅವರನ್ನು ಸೇನೆಯು ವಶಕ್ಕೆ ತೆಗೆದುಕೊಂಡಿದೆ.
ಪಾಕಿಸ್ಥಾನ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ ಸೋಮವಾರ(ಆಗಸ್ಟ್12) ಹೇಳಿಕೆಯೊಂದರಲ್ಲಿ “ಪಾಕಿಸ್ಥಾನದ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ, ವಿವರವಾದ ನ್ಯಾಯಾಂಗ ತನಿಖೆಯನ್ನು
ಪಾಕಿಸ್ಥಾನ ಸೇನೆಯು ಕೈಗೊಂಡಿದೆ. ಪಾಕಿಸ್ಥಾನ ಸೇನಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಜನರಲ್ ಫೈಜ್ ಹಮೀದ್ (ನಿವೃತ್ತ) ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗಿದೆ’ ಎಂದು ಹೇಳಿದೆ.
ನಿವೃತ್ತಿಯ ನಂತರ ಪಾಕಿಸ್ಥಾನದ ಸೇನಾ ಕಾಯಿದೆಯ ಉಲ್ಲಂಘನೆಯ ಅನೇಕ ನಿದರ್ಶನಗಳನ್ನು ಸಹ ದಾಖಲಿಸಲಾಗಿದೆ. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು ಫೈಜ್ ಹಮೀದ್ ಅವರನ್ನು ಮಿಲಿಟರಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ”ಎಂದು ಸೇನೆ ಹೇಳಿದೆ.
ಈ ವರ್ಷದ ಮಾರ್ಚ್‌ನಲ್ಲಿ, ರಾವಲ್ಪಿಂಡಿಯ ನ್ಯಾಯಾಲಯವು ಫೈಜ್ ಹಮೀದ್ ಅವರ ಸಹೋದರ ನಜಾಫ್ ಹಮೀದ್‌ರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಿತ್ತು.